ಹೊರರಾಜ್ಯದ ಜಾನುವಾರನ್ನು ನಮ್ಮ ಕಾಡಿನಲ್ಲಿ ಮೇಯಿಸುವುದಕ್ಕೆ ನಿಷೇಧ: ಸಚಿವ ಈಶ್ವರ್ ಖಂಡ್ರೆ

0
Spread the love

ಬೆಂಗಳೂರು: ಹೊರ ರಾಜ್ಯದ ಜಾನುವಾರನ್ನು ನಮ್ಮ ಕಾಡಿನಲ್ಲಿ ಮೇಯಿಸುವುದಕ್ಕೆ ನಿಷೇಧ ಹೇರಲಾಗಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಬಿ ಖಂಡ್ರೆ ಹೇಳಿದ್ದಾರೆ. ವಿಧಾನಸಭೆಯಲ್ಲಿ ಮಾತನಾಡಿದ ಅವರು,

Advertisement

ಮಲೆ ಮಹದೇಶ್ವರ ಬೆಟ್ಟದಲ್ಲಿ 5 ಹುಲಿಗಳ ಸಾವು  ಸಂಭವಿಸಿದಾಗ ತಮಿಳುನಾಡಿನಿಂದ ಸಾವಿರಾರು ಜಾನುವಾರುಗಳನ್ನು ತಂದು ನಮ್ಮ ಅರಣ್ಯ ನಾಶ ಪಡಿಸುತ್ತಿರುವ ಅಂಶ ವರದಿಯಲ್ಲಿ ತಮ್ಮ ಗಮನಕ್ಕೆ ಬಂದ ಬಳಿಕ, ಹೊರ ರಾಜ್ಯದ ಜಾನುವಾರನ್ನು ನಮ್ಮ ಕಾಡಿನಲ್ಲಿ ಮೇಯಿಸುವುದಕ್ಕೆ ನಿಷೇಧ ಹೇರಲಾಗಿದೆ.

ನಮ್ಮ ರಾಜ್ಯದ ಕುರಿಗಾಹಿಗಳಿಗೆ ತೊಂದರೆ ನೀಡದಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದ್ದಾರೆ. ಇನ್ನೂ ಡೀಮ್ಡ್ ಅರಣ್ಯದ ಬಗ್ಗೆ ಈಗಾಗಲೇ ಮರು ಸಮೀಕ್ಷೆ ನಡೆಯುತ್ತಿದೆ. ಸರ್ವೋನ್ನತ ನ್ಯಾಯಾಲಯ ಮತ್ತೊಂದು ಅವಕಾಶ ನೀಡಿದ್ದು, ಸಮೀಕ್ಷೆಯಲ್ಲಿ ಅರಣ್ಯದಂತೆ ಇಲ್ಲದ ಯಾವ ಪ್ರದೇಶ ಕೈಬಿಡಬಹುದು ಯಾವುದನ್ನು ಸೇರಿಸಬಹುದು ಎಂಬುದನ್ನು ಪರಾಮರ್ಶಿಸಲಾಗುವುದು ಎಂದು ತಿಳಿಸಿದರು.


Spread the love

LEAVE A REPLY

Please enter your comment!
Please enter your name here