ಉಡುಪಿ:- ಎಎಸ್ಪಿ ಕಾರಿಗೆ ಹಿಂದಿನಿಂದ ಗುದ್ದಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಿನ್ನೆಲೆ ತಿಮರೋಡಿಯ ಮೂವರನ್ನು ಬಂಧಿಸಲಾಗಿದೆ.
Advertisement
ಮಹೇಶ್ ಶೆಟ್ಟಿ ತಿಮರೋಡಿಯನ್ನು ಬಂಧಿಸಿ ಕರೆದುಕೊಂಡು ಹೋಗುತ್ತಿದ್ದ ವೇಳೆ ಎಎಸ್ಪಿ ಕಾರಿಗೆ ಹಿಂದಿನಿಂದ ಗುದ್ದಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಿನ್ನೆಲೆ ತಿಮರೋಡಿಯ ಮೂವರು ಬೆಂಬಲಿಗರನ್ನು ಬಂಧಿಸಲಾಗಿದೆ.
ಸೃಜನ್, ಹಿತೇಶ್ ಹಾಗೂ ಸಹನ್ ಬಂಧಿತರು. ಉಡುಪಿ ಜಿಲ್ಲೆ ಕಾರ್ಕಾಳ ತಾಲೂಕಿನ ಹೊಸಮಾರು ಬಳಿ ಘಟನೆ ನಡೆದಿದೆ. ಪೊಲೀಸರು ಮಹೇಶ್ ಶೆಟ್ಟಿ ತಿಮರೋಡಿಯನ್ನು ಬಂಧಿಸಿ ಕರೆದುಕೊಂಡು ಹೋಗುತ್ತಿದ್ದರು. ಈ ವೇಳೆ ಎಎಸ್ಪಿ ಕಾರು ಕೂಡ ಪೊಲೀಸರೊಂದಿಗೆ ತೆರಳುತ್ತಿತ್ತು. ಈ ವೇಳೆ ಮಹೇಶ್ ಶೆಟ್ಟಿ ತಿಮರೋಡಿಯ ಬೆಂಬಲಿಗರು ಹಿಂದಿನಿಂದ ಎಎಸ್ಪಿ ಕಾರಿಗೆ ಗುದ್ದಿದ್ದಾರೆ ಎನ್ನಲಾಗಿದೆ.
ಘಟನೆ ಸಂಬಂಧ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.