ವಿಜಯಸಾಕ್ಷಿ ಸುದ್ದಿ, ಬೆಟಗೇರಿ: ಇಲ್ಲಿನ ಹುಯಿಲಗೋಳ ರಸ್ತೆಯ ಗೌರಿಗುಡಿ ಓಣಿಯಲ್ಲಿರುವ ಶ್ರೀ ಗೌರಿ ಗಣೇಶ ಶಿಕ್ಷಣ ಸಂಸ್ಥೆಯಲ್ಲಿ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಬಾಲ ಕೃಷ್ಣನನ್ನು ತೊಟ್ಟಿಲಿಗೆ ಹಾಕುವ ಮೂಲಕ ಅದ್ದೂರಿಯಾಗಿ ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ನಿರ್ದೇಶಕ ಬಸವರಾಜ ಕುಂದಗೋಳ ವಹಿಸಿದ್ದರು.
Advertisement
ಶಾಲೆಯ ಮಕ್ಕಳು ಕೃಷ್ಣ ಮತ್ತು ರಾಧೆಯ ವೇಷಭೂಷಣಗಳನ್ನು ಧರಿಸಿ ಸಾಕ್ಷಾತ್ ಕೃಷ್ಣ- ರಾಧೆಯರಂತೆ ಕಂಗೊಳಿಸಿದರು. ಶಾಲೆಯ ಮುಖ್ಯೋಪಾಧ್ಯಾಯ ಎಸ್.ಪಿ. ಅರ್ಕಸಾಲಿ, ಸಹ ಶಿಕ್ಷಕಿಯರಾದ ಎಸ್.ಎಮ್. ದೇವಧರ, ಯು.ಕೆ. ಕೊಂಗಾರಿ, ಎಸ್.ಎಸ್. ಗುಗ್ಗರಿ, ಎಮ್.ಎಲ್. ಕೊಪ್ಪಳ, ಯು.ಎ. ಹುನಕುಂಟಿ. ಕೆ.ಬಿ. ಮಾರನಬಸರಿ ಜಿ.ಎಂ. ನೀಲವಾಣಿ, ಎನ್.ಎಮ್. ನಾಗರಾಳ, ಎಸ್.ಎಫ್. ಗೌಡರ ಉಪಸ್ಥಿತರಿದ್ದರು.