ಬೆಂಗಳೂರು:- ಸಂಚಾರಿ ದಂಡ ಪಾವತಿಸಲು ಈ ಹಿಂದೆ ನೀಡಲಾಗಿದ್ದ ಅರ್ಧದಷ್ಟು ರಿಯಾಯಿತಿಯನ್ನು ಮತ್ತೊಮ್ಮೆ ಜಾರಿಗೆ ತರುವ ಮೂಲಕ ವಾಹನ ಸವಾರರಿಗೆ ರಾಜ್ಯ ಸರ್ಕಾರ ಸಿಹಿಸುದ್ದಿ ನೀಡಿದೆ. ಸಂಚಾರಿ ದಂಡ ಪಾವತಿಗೆ ಶೇ.50ರಷ್ಟು ರಿಯಾಯಿತಿ ಅವಕಾಶವನ್ನು ಮತ್ತೊಮ್ಮೆ ನೀಡಲಾಗುತ್ತಿದೆ.
ಎಸ್, ಸಂಚಾರ ದಂಡ ಕಟ್ಟೋಕೆ ರಾಜ್ಯ ಸರ್ಕಾರ ಭರ್ಜರಿ ಆಫರ್ ನೀಡಿದೆ. ಈ ಹಿಂದೆ ಸರ್ಕಾರ ಸಂಚಾರ ದಂಡದಲ್ಲಿ ಶೇಕಡ 50ರಷ್ಟು ವಿನಾಯಿತಿ ಮಾಡಿತ್ತು. ಆ ವೇಳೆ ಸಾಕಷ್ಟು ಜನ ತಮ್ಮ ವಾಹನಗಳ ಮೇಲೆ ಬಿದ್ದಿದ್ದ ದಂಡವನ್ನ ಸರತಿ ಸಾಲಿನಲ್ಲಿ ನಿಂತು ಪಾವತಿ ಮಾಡಿದ್ರು. ಸದ್ಯ ಆ ಆಫರ್ ನ ಸರ್ಕಾರ ಮತ್ತೆ ಘೋಷಣೆ ಮಾಡಿದೆ. 9/2/ 2023 ರ ಹಿಂದೆ ದಾಖಲಾಗಿರುವ ಪ್ರಕರಣಗಳಿಗೆ ಮಾತ್ರ ಈ ಆಫರ್ ಅನ್ವಯಿಸುತ್ತದೆ. ಇನ್ನೂ 50% ಆಫರ್ ನಲ್ಲಿ ಫೈನ್ ಕಟ್ಟಲು 12/9/2025 ರ ವರೆಗೆ ಕಾಲಾವಕಾಶವಿದ್ದು, ಈಗಲೇ ನಿಮ್ಮ ಹತ್ತಿರದ ಸಂಚಾರಿ ಠಾಣೆ ಅಧಿಕಾರಿಗಳು ಹಾಗೂ ಆನ್ ಲೈನ್ ಮೂಲಕ ದಂಡ ಪಾವತಿಸಬಹುದಾಗಿದೆ.