ಪಾಟ್ನಾ:- ಅನಾರೋಗ್ಯದಿಂದ ಬಳಲುತ್ತಿದ್ದ ಜನಪ್ರಿಯ ಪಂಜಾಬಿ ಹಾಸ್ಯನಟ ಜಸ್ವಿಂದರ್ ಭಲ್ಲಾ ವಿಧಿವಶರಾಗಿದ್ದಾರೆ.
ವರದಿಗಳ ಪ್ರಕಾರ, ಭಲ್ಲಾ ಕಳೆದ ಕೆಲ ತಿಂಗಳಿಂದ ತೀವ್ರ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು ಅಂತ ತಿಳಿದುಬಂದಿದೆ. ಚಿಕಿತ್ಸೆ ಫಲಿಸದೇ ಮೊಹಾಲಿಯ ಫೋರ್ಟಿಸ್ ಆಸ್ಪತ್ರೆಯಲ್ಲಿ ನಿಧನರಾದರು. ಸದ್ಯ ಭಲ್ಲಾ ಸಾವಿನ ಸುದ್ದಿ ಪಂಜಾಬಿ ಚಲನಚಿತ್ರೋದ್ಯಮ ಮತ್ತು ಅಪಾರ ಸಂಖ್ಯೆಯ ಅಭಿಮಾನಿಗಳನ್ನ ಆಘಾತಕ್ಕೆ ದೂಡಿದೆ.
ಆಗಸ್ಟ್ 23 ರಂದು ಮಧ್ಯಾಹ್ನ 12 ಗಂಟೆಗೆ ಮೊಹಾಲಿಯ ಬಲೋಂಗಿ ರುಧ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಅಂತಿಮ ನಮನ ಸಲ್ಲಿಸಲು ಅಭಿಮಾನಿಗಳು ಮತ್ತು ಕಲಾವಿದರು ಹೆಚ್ಚಿನ ಸಂಖ್ಯೆಯಲ್ಲಿ ಸೇರುವ ನಿರೀಕ್ಷೆಯಿದೆ.
ಜನಪ್ರಿಯ ಹಾಸ್ಯ ನಟನಾಗಿದ್ದ ಭಲ್ಲಾ ಜನರ ಮನಸ್ಸಿನಲ್ಲಿ ನೆಲೆಯೂರಿದ್ದರು. ‘ಗಡ್ಡಿ ಚಲದೀ ಹೈ ಚಲ್ಲಾ ಮಾರ್ಕೆ’, ‘ಕ್ಯಾರಿ ಆನ್ ಜಟ್ಟಾ’, ‘ಜಿಂದ್ ಜಾನ್’ ಮತ್ತು ‘ಬ್ಯಾಂಡ್ ಬಾಜೆ’ ಅವರು ಅಭಿನಯಿಸಿದ ಸ್ಮರಣೀಯ ಚಿತ್ರಗಳಾಗಿವೆ.