ಪಾಲಕ್ಕಾಡ್:- ಕೇರಳ ಕಾಂಗ್ರೆಸ್ ಶಾಸಕನ ವಿರುದ್ಧ ಗಂಭೀರ ಆರೋಪವೊಂದು ಕೇಳಿ ಬಂದಿದ್ದು, ತೃತೀಯ ಲಿಂಗಿ ಓರ್ವರು ನ್ಯಾಯಕ್ಕಾಗಿ ಠಾಣೆ ಮೆಟ್ಟಿಲೇರಿದ್ದಾರೆ.
ಎಸ್, ಇಲ್ಲಿನ ಪಾಲಕ್ಕಾಡ್ ಕಾಂಗ್ರೆಸ್ ಶಾಸಕ ರಾಹುಲ್ ಮಮ್ಕೂಟತಿಲ್ ವಿರುದ್ಧ ತೃತೀಯಲಿಂಗಿಯೊಬ್ಬರು ಲೈಂಗಿಕ ಕಿರುಕುಳ ಆರೋಪಹೊರಿಸಿದ್ದಾರೆ. ರಾಹುಲ್ ತನ್ನ ಮೇಲೆ ಅತ್ಯಾಚಾರ ಮಾಡುವ ಬಯಕೆಯನ್ನು ವ್ಯಕ್ತಪಡಿಸಿ ಸಂದೇಶಗಳನ್ನು ಕಳುಹಿಸಿದ್ದ ಎಂದು ಆರೋಪಿಸಿದ್ದಾರೆ. ನನ್ನನ್ನು ಲೈಂಗಿಕ ಕ್ರಿಯೆಯಲ್ಲಿ ತೊಡಗುವಂತೆ ಒತ್ತಾಯಿಸಿದ್ದ, ಬೆಂಗಳೂರು ಅಥವಾ ಹೈದರಾಬಾದ್ಗೆ ಹೋಗೋಣ ಬಾ ಎಂದು ಕರೆದಿದ್ದ ಎಂದು ತೃತೀಯಲಿಂಗಿ ಎಂದು ಹೇಳಿದ್ದಾರೆ.
ಚುನಾವಣಾ ಚರ್ಚೆಯ ಸಮಯದಲ್ಲಿ ಅವರು ಮೊದಲು ಭೇಟಿಯಾಗಿದ್ದರು. ಸಾಮಾನ್ಯ ಸ್ನೇಹವಾಗಿ ಪ್ರಾರಂಭವಾದದ್ದು ಸಾಮಾಜಿಕ ಮಾಧ್ಯಮದಲ್ಲಿನ ಸಂದೇಶಗಳ ಮೂಲಕ ಅಸಹ್ಯಕರ ಅನುಭವವಾಗಿ ಬದಲಾಯಿತು ಎಂದು ಅವಂತಿಕಾ ಹೇಳಿದ್ದಾರೆ. ಇನ್ನೂ ಮಲಯಾಳಂ ನಟಿ ರಿನಿ ಜಾರ್ಜ್ ಮತ್ತು ನಂತರ ಬರಹಗಾರ ಹನಿ ಭಾಸ್ಕರನ್ ಅವರು ನೀಡಿದ ಕಿರುಕುಳ ಆರೋಪದ ಹಿನ್ನೆಲೆಯಲ್ಲಿ ರಾಹುಲ್ ಗುರುವಾರ ಕೇರಳ ಯುವ ಕಾಂಗ್ರೆಸ್ ರಾಜ್ಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ . ಪ್ರಮುಖ ರಾಜಕೀಯ ಪಕ್ಷದ ನಾಯಕಿಯೊಬ್ಬರು ಆಕ್ಷೇಪಾರ್ಹ ಸಂದೇಶಗಳನ್ನು ಕಳುಹಿಸಿ ಹೋಟೆಲ್ಗೆ ಆಹ್ವಾನಿಸಿದ್ದಾರೆ ಎಂದು ರಿನಿ ಆರೋಪಿಸಿದ್ದರು . ಅವರು ಯಾರನ್ನೂ ಹೆಸರಿಸದಿದ್ದರೂ, ಬಿಜೆಪಿ ಮತ್ತು ಡಿವೈಎಫ್ಐ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಮಮ್ಕೂಟತಿಲ್ ಕಚೇರಿಯಲ್ಲಿ ಪ್ರತಿಭಟನೆ ನಡೆಸಿದ್ದವು.