ಚಿಕ್ಕೋಡಿ:- ನಿಪ್ಪಾಣಿ ತಾಲ್ಲೂಕಿನ ಬೇಡಕಿಹಾಳ ಗ್ರಾಮದಲ್ಲಿ ಸುರಿದ ನಿರಂತರ ಮಳೆಯಿಂದಾಗಿ ಮನೆಯ ಗೋಡೆ ಕುಸಿದು ಮಹಿಳೆ ಗಂಭೀರವಾಗಿ ಗಾಯಗೊಂಡ ಘಟನೆ ಜರುಗಿದೆ.
Advertisement
ಬೇಡಕಿಹಾಳ ಗ್ರಾಮದ ಸಿದ್ದೇಶ್ವರ ಕೆರೆಯ ಬಳಿಯಲ್ಲಿರುವ ನಿತಿನ್ ಜಟಾರ ಎಂಬುವವರ ಮನೆಯ ಗೋಡೆ ಕುಸಿದು ಈ ಅವಾಂತರ ನಡೆದಿದೆ. ಗೋಡೆ ಕುಸಿತ ಹಿನ್ನಲೆ ಗೋಡೆಯ ಪಕ್ಕದಲ್ಲಿಯೇ ಪಾತ್ರೆ ತೊಳೆಯುತ್ತಿದ್ದ ಮಾಧುರಿ ನಿತಿನ್ ಜಟಾರ್ ಅವರ ಮೇಲೆ ಗೋಡೆ ಬಿದ್ದಿದೆ.
ಹೀಗಾಗಿ ಗೋಡೆಯ ಕಲ್ಲುಗಳನ್ನು ಸ್ಥಳೀಯರು ತೆರವುಗೊಳಿಸಿದರು. ಗಾಯಗೊಂಡ ಮಾಧುರಿಯನ್ನು ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗೋಡೆ ಕುಸಿದ ಪರಿಣಾಮ ಮನೆಯ ದಿನಬಳಕೆಯ ವಸ್ತುಗಳಿಗೆ ಹಾನಿಯಾಗಿದೆ. ಸದಲಗಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.