ಸ್ಯಾಂಡಲ್ ವುಡ್ ಕ್ವೀನ್ ಹಾಗೂ ಮಾಜಿ ರಾಜಕಾರಣಿ ನಟಿ ರಮ್ಯಾ ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿದ್ದಾರೆ. ಒಂದಲ್ಲ ಒಂದು ವಿಚಾರದ ಕುರಿತು ನಟಿ ಸಾಮಾಜಿಕ ಜಾಲಾ ತಾಣದಲ್ಲಿ ಪ್ರತಿಕ್ರಿಯೆ ನೀಡುತ್ತಲೆ ಇರುತ್ತಾರೆ. ಇದೀಗ ಸುಪ್ರೀಂ ಕೋರ್ಟ್ ಬೀದಿನಾಯಿಗಳ ವಿಚಾರದಲ್ಲಿ ನೀಡಿರುವ ಮಹತ್ವದ ತೀರ್ಪಿನ ಕುರಿತು ನಟಿ ಪ್ರತಿಕ್ರಿಯೆ ನೀಡಿದ್ದಾರೆ.
Advertisement
- ದೆಹಲಿ – ಎನ್‌ಸಿಆರ್‌ನ ಬೀದಿಗಳಿಂದ ಬೀದಿ ನಾಯಿಗಳನ್ನು ಪ್ರಾಣಿಗಳ ಶೆಲ್ಟರ್ ಇರುವ ಪ್ರದೇಶಕ್ಕೆ ಸ್ಥಳಾಂತರಿಸುವ ವಿಷಯದ ಕುರಿತು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ಪ್ರಕಟಿಸಿದೆ. ಬೀದಿ ನಾಯಿಗಳನ್ನು ಸ್ಥಳಾಂತರ ಮಾಡುವ ಬಗ್ಗೆ ಕೊಡಲಾಗಿರುವ ಸೂಚನೆಗಳನ್ನು ಪಾಲಿಕೆಯ ಅಧಿಕಾರಿಗಳು ಪಾಲನೆ ಮಾಡುವುದನ್ನು ಮುಂದುವರಿಸಬೇಕು ಎಂದು ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ಹೇಳಲಾಗಿದೆ. ಏತನ್ಮಧ್ಯೆ ಬೀದಿ ನಾಯಿಗಳನ್ನು ಅನಿರ್ದಿಷ್ಟಾವಧಿಗೆ ನಾಯಿಗಳ ಆಶ್ರಯ ತಾಣಗಳಲ್ಲಿ ಬಿಡಲಾಗುವುದು ಎನ್ನುವ ಷರತ್ತನ್ನು ತಿದ್ದುಪಡಿ ಮಾಡಿದೆ. ಲಸಿಕೆ ಹಾಕಿದನಂತರವೇ ಅವುಗಳನ್ನು ತೆಗೆದುಕೊಂಡು ಹೋದ ಅಥವಾ ಕರೆದುಕೊಂಡು ಹೋಗಿರುವ ಸ್ಥಳದಲ್ಲೇ ಮತ್ತೆ ತೆಗೆದುಕೊಂಡು ಬಂದು ಬಿಡಬೇಕು ಎಂದು ನ್ಯಾಯಾಲಯ ಸೂಚಿಸಿದೆ.
- ಇದು ಮಧ್ಯಂತರ ಆದೇಶವಾಗಿದೆ ಆದ್ದರಿಂದ ಇದನ್ನು ಸಂಕ್ಷಿಪ್ತವಾಗಿ ಚರ್ಚಿಸಲಾಗಿದೆ. ನಾವು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಪಕ್ಷಗಳನ್ನಾಗಿ ಮಾಡಿದ್ದೇವೆ (ಪರಿಪಾಲನೆ ಅಥವಾ ಅಭಿವೃದ್ಧಿಪಡಿಸಬೇಕು) ಎಂದು ನ್ಯಾಯಾಲಯ ತಿಳಿಸಿದೆ.
- ಸಾರ್ವಜನಿಕವಾಗಿ ಬೀದಿ ನಾಯಿಗಳಿಗೆ ಆಹಾರ ಕೊಡುವುದಕ್ಕೆ ಅವಕಾಶವಿಲ್ಲ ಎಂದು ಸುಪ್ರೀಂ ಕೋರ್ಟ್ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ. ಬೀದಿ ನಾಯಿಗಳಿಗೆ ಪ್ರತ್ಯೇಕ ಆಹಾರ ಸ್ಥಳಗಳನ್ನು ಮಾಡಲಾಗುವುದು. ಈ ರೀತಿಯ ಆಹಾರದಿಂದಾಗಿ ಅನೇಕ ಘಟನೆಗಳು ಸಂಭವಿಸಿವೆ. ನಾಯಿ ಕಡಿತದಿಂದಾಗಿ ಜನರು ರೇಬೀಸ್ ಕಾಯಿಲೆಗೆ ತುತ್ತಾಗಿದ್ದಾರೆ ಮತ್ತು ಅನೇಕ ಚಿಕ್ಕ ಮಕ್ಕಳು ಸಾವನ್ನಪ್ಪಿದರು ಮತ್ತು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಸುಪ್ರೀಂ ಕೋರ್ಟ್ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.
- ಬೀದಿನಾಯಿಗಳಿಗೆ ಪ್ರತ್ಯೇಕ ಆಹಾರ ಸ್ಥಳಗಳನ್ನು ಮಾಡಬೇಕು. ನಾಯಿಗಳನ್ನು ದತ್ತು ಪಡೆಯಲು ದೆಹಲಿ ಮಹಾನಗರ ಪಾಲಿಕೆಗೆ (MCD) ಅರ್ಜಿ ಸಲ್ಲಿಕೆ ಮಾಡಬೇಕು ಎಂದು ತಿಳಿಸಿದೆ.
- ಆರೋಗ್ಯ ಸಮಸ್ಯೆ ಎದುರಿಸುತ್ತಿರುವ ಹಾಗೂ ಕಚ್ಚುವ ನಾಯಿಗಳನ್ನು ಇದೇ ರೀತಿ ಬಿಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಉಲ್ಲೇಖಿಸಿದೆ. ಈ ವಿಚಾರವನ್ನು ನಟಿ ರಮ್ಯಾ ಅವರು ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು, ಅದರೊಂದಿಗೆ ನಾಯಿಗಳ ವಿಚಾರವಾಗಿ ವಿಡಿಯೋಗಳನ್ನೂ ಅವರು ಶೇರ್ ಮಾಡಿದ್ದಾರೆ.
ಅಲ್ಲದೇ ಈ ಪೋಸ್ಟ್‌ನಲ್ಲಿ ನಟಿ ರಮ್ಯಾ ಅವರು, Win for the dogs and compassion! Love always wins ಎಂದು ಬರೆದುಕೊಂಡಿದ್ದಾರೆ.