ಇತ್ತೀಚೆಗೆ ಸಿನಿಮಾ ರಂಗದಲ್ಲಿ ಡಿವೋರ್ಸ್ ಗಳು ಕಾಮನ್ ಆಗಿವೆ. ಒಂದರ ಹಿಂದೊಂದರಂತೆ ಸೆಲೆಬ್ರಿಟಿಗಳ ಜೀವನ ಹಳಿ ತಪ್ಪುತ್ತಿದೆ. ಇದೀಗ ಬಾಲಿವುಡ್ ಚಿತ್ರರಂಗದ ಖ್ಯಾತ ಹಿರಿಯ ನಟ ಗೋವಿಂದ ಅವರ ಸಂಸಾರದಲ್ಲಿ ಬಿರುಕು ಮೂಡಿದ್ದು ವಿಚ್ಚೇಧನಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ನಟ ಗೋವಿಂದ್ ಪತ್ನಿ ಸುನೀತಾ ಅಹುಜಾ ಅವರು ಬಾಂದ್ರಾ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ.ಸುನೀತಾ ಅಹುಜಾ ಹಿಂದೂ ವಿವಾಹ ಕಾಯ್ದೆ 1955ರ ಸೆಕ್ಷನ್ 13 (1), (i), (ia), (ib) ಅಡಿಯಲ್ಲಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದು, ಪ್ರೀತಿ ಮತ್ತು ವಿವಾಹದಲ್ಲಿ ಮೋಸ ಹಾಗೂ ಪ್ರತ್ಯೇಕವಾಗಿ ವಾಸಿಸುತ್ತಿದ್ದೇವೆ ಅಂತ ಕಾರಣ ನೀಡಿ ವಿಚ್ಚೇದನ ಕೋರಿದ್ದಾರೆ.
ಈ ಹಿಂದೆಯೇ ಅಹುಜಾ ಅವರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು ಎಂದು ತಿಳಿದುಬಂದಿದೆ. ಮೇ 25ರಂದು ಗೋವಿಂದಾಗೆ ಕೋರ್ಟ್ ಸಮನ್ಸ್ ಜಾರಿ ಮಾಡಿತ್ತು. ಜೂನ್ ತಿಂಗಳಿಂದ ಎರಡು ಬಾರಿ ಕೋರ್ಟ್ ವಿಚಾರಣೆ ನಡೆಸಿದೆ. ಆದರೆ ಗೋವಿಂದಾ ಎರಡೂ ಬಾರಿ ಗೈರಾಗಿದ್ದು, ಸುನೀತಾ ಎರಡು ಬಾರಿ ಕೋರ್ಟ್‌ಗೆ ಹಾಜರಾಗಿ ವಿಚಾರಣೆ ಎದುರಿಸಿದ್ದಾರೆ.
ಕಳೆದ ಫೆಬ್ರವರಿ ಇಂದಿಲೇ ಇಬ್ಬರ ನಡುವಿನ ಸಾಂಸಾರಿಕ ಜೀವನ ಸರಿ ಇಲ್ಲ ಎಂಬ ಮಾತುಗಳು ಕೇಳಿ ಬಂದಿದೆ. ನಟ ಗೋವಿಂದ ಅವರು 30 ವರ್ಷದ ಮರಾಠಿ ನಟಿ ಜೊತೆ ಹೆಚ್ಚು ಆತ್ಮೀಯರಾಗಿದ್ದೇ ಗೋವಿಂದ್ ಹಾಗೂ ಸುನೀತಾ ನಡುವಿನ ಡಿವೋರ್ಸ್ ಗೆ ಕಾರಣ ಎನ್ನಲಾಗುತ್ತಿದೆ. ಡಿವೋರ್ಸ್ ಸುದ್ದಿಯ ನಡುವೆಯೇ ಗೋವಿಂದಾ ಹಾಗೂ ಸುನೀತಾ ಅಹುಜಾ ಕುಟುಂಬದ ಆತ್ಮೀಯ ಲಲಿತ್ ಬಿಂಡಾಲ್ ಪ್ರತಿಕ್ರಿಯಿಸಿದ್ದು, ಊಹಾಪೋಹಕ್ಕೆ ತೆರೆ ಎಳೆದಿದ್ದಾರೆ. ಇಬ್ಬರು ಜೊತೆಯಾಗಿದ್ದಾರೆ. ಯಾವುದೇ ಸಮಸ್ಯೆ ಇಲ್ಲ. ಮಾಧ್ಯಮಗಳು ಇಲ್ಲ ಸಲ್ಲದ ವರದಿ ಮಾಡುತ್ತಿದೆ. ಅವರ ಖಾಸಗಿ ಬದುಕಿಗೆ ಅವಕಾಶ ಮಾಡಿಕೊಡಿ ಎಂದಿದ್ದಾರೆ.