ಬೆಂಗಳೂರು:- ಧರ್ಮಸ್ಥಳದ ಸೌಜನ್ಯ ತಾಯಿಯನ್ನು ವಿಚಾರಣೆಗೆ ಒಳಪಡಿಸಬೇಕು ಎಂದು ಚಕ್ರವರ್ತಿ ಸೂಲಿಬೆಲೆ ಆಗ್ರಹ ಮಾಡಿದ್ದಾರೆ.
ಈ ಸಂಬಂಧ ಮಾತನಾಡಿದ ಸೂಲಿಬೆಲೆ, ಸೌಜನ್ಯ ತಾಯಿ ಕುಸುಮಾವತಿ ಅವರನ್ನು ವಿಚಾರಣೆಗೆ ಒಳಪಡಿಸಬೇಕು. ಸುಜಾತ ಭಟ್ ಅವರನ್ನು ಹೇಗೆ ಈ ಗುಂಪು ಷಡ್ಯಂತ್ರ ಮಾಡಿ ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಮಾಡಿತ್ತು. ಹೆಣ್ಣು ಮಕ್ಕಳ ವಿಚಾರ ಬಂದಾಗ ಸಮಾಜ ಬೇಗ ಕರಗುತ್ತದೆ. ಈ ಗುಂಪು ಇದನ್ನೇ ಗುರಾಣಿಯನ್ನಾಗಿ ಇಟ್ಟುಕೊಂಡು ಸುಜಾತ ಭಟ್ ಅವರನ್ನು ಮುಂದಿರಿಸಿ ದಿನೇ ದಿನೇ ಕಥೆ ಕಟ್ಟುತ್ತಿದ್ದರು ಎಂದು ಹೇಳಿದರು.
ಸೌಜನ್ಯ ಮೇಲೆ ಅತ್ಯಾಚಾರವಾಗಿದೆ. ಆ ಹೆಣ್ಣು ಮಗಳಿಗೆ ನ್ಯಾಯ ಸಿಗಬೇಕು. ಅತ್ಯಾಚಾರ ಮಾಡಿದವರು ಜೈಲಿಗೆ ಹೋಗಬೇಕು ಎಂದು ನಾನು ಆಗ್ರಹ ಮಾಡುತ್ತೇನೆ. ಈ ಬದ್ಧತೆಯನ್ನು ಇಟ್ಟುಕೊಂಡೇ ನಾನು ಮಾತನಾಡುತ್ತಿದ್ದೇನೆ. ಈಗ ಹೇಗೆ ಮಾಸ್ಕ್ ಮ್ಯಾನ್, ಸುಜತಾ ಭಟ್ ಹೇಗೆ ಷಡ್ಯಂತ್ರದ ಭಾಗವಾಗಿದ್ದಾರೋ ಅದೇ ರೀತಿ ಸೌಜನ್ಯ ತಾಯಿ ಕುಸುಮಾವತಿ ಕೂಡ ಯಾವುದೋ ಷಡ್ಯಂತ್ರದ ಭಾಗವಾಗಿರುವುದು ಮೆಲ್ನೋಟಕ್ಕೆ ಗೊತ್ತಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.