ಕೃಷ್ಣಾ ನದಿಯಲ್ಲಿ ದುರಂತ: ಎತ್ತಿನ ಮೈ ತೊಳೆಯುತ್ತಿದ್ದ ರೈತನನ್ನು ಎಳೆದೊಯ್ದ ಮೊಸಳೆ

0
Spread the love

ವಿಜಯಪುರ:- ಮುದ್ದೇಬಿಹಾಳದ ತಂಗಡಗಿ ಗ್ರಾ.ಪಂ ವ್ಯಾಪ್ತಿಯ ಕುಂಚಗನೂರ ಗ್ರಾಮದಲ್ಲಿ ಅಮವಾಸ್ಯೆ ಹಿನ್ನೆಲೆ ಎತ್ತಿನ ಮೈ ತೊಳೆಯಲು ಕೃಷ್ಣಾ ನದಿ ತೀರಕ್ಕೆ ಹೋಗಿದ್ದ ರೈತನನ್ನು ಮೊಸಳೆ ಎಳೆದೊಯ್ದಿರುವ ಘಟನೆ ಜರುಗಿದೆ.

Advertisement

ಕಾಶೀನಾಥ ಹಣಮಂತ ಕಂಬಳಿ (38) ಮೊಸಳೆ ದಾಳಿಗೆ ಒಳಗಾದ ರೈತ. ಕಾಶಿನಾಥನನ್ನು ಮೊಸಳೆ ಹೊತ್ತೊಯ್ದಿದ್ದನ್ನು ನೋಡಿರುವುದಾಗಿ ಕುಂಚಗನೂರ ಗ್ರಾಮದ ಧರೆಪ್ಪ ಬಟಕುರ್ಕಿ ಅವರು ಮಾಹಿತಿ ನೀಡಿದ್ದಾರೆ.

ಇಂದು ಅಮವಾಸ್ಯೆಯ ಹಿನ್ನೆಲೆ ಕಾಶೀನಾಥ ಅವರು ಎತ್ತುಗಳ ಮೈ ತೊಳೆಯಲು ಕೃಷ್ಣಾ ನದಿ ತೀರಕ್ಕೆ ತೆರಳಿದ್ದರು. ಈ ವೇಳೆ ರೈತನನ್ನು ಮೊಸಳೆ ಎಳೆದುಕೊಂಡು ಹೋಗಿದೆ. ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿಯಿಂದ ನಾಪತ್ತೆಯಾದ ರೈತನನ್ನು ಹುಡುಕುತ್ತಿದ್ದಾರೆ.


Spread the love

LEAVE A REPLY

Please enter your comment!
Please enter your name here