ಪ್ರತಿದಿನ ಬೆಳಗ್ಗೆ ಎದ್ದಕೂಡಲೆ ಕಾಫಿ ಕುಡಿಯದಿದ್ದರೆ ಕೆಲವರಿಗೆ ನೆಮ್ಮದಿಯೇ ಇರುವುದಿಲ್ಲ. ಅದರಲ್ಲೂ ಕೆಲವರಿಗೆ ಬ್ಲಾಕ್ ಕಾಫಿಯೇ ಬೇಕು. ತೂಕ ಇಳಿಸಿಕೊಳ್ಳಲು ಸಹಾಯ ಮಾಡುವ ಬ್ಲಾಕ್ ಕಾಫಿಯಿಂದ ಸಾಕಷ್ಟು ಪ್ರಯೋಜನಗಳಿವೆ. ಕಾಫಿಯಲ್ಲಿನ ಕೆಫೀನ್ ಅಂಶದಿಂದ ನರಮಂಡಲ ಚುರುಕುಗೊಳ್ಳಲು ಸಹಾಯಕವಾಗಿದೆ.
ಮೆದುಳಿನ ಕ್ರಿಯೆಯನ್ನು ಚುರುಕುಗೊಳಿಸುತ್ತದೆ. ಹಾಗೂ ಖಿನ್ನತೆಯನ್ನು ದೂರ ಮಾಡಲು ಒಂದು ಕಪ್ ಕಾಫಿ ಸಹಾಯಕವಾಗಿದೆ. ಯಕೃತ್ತಿನ ರೋಗಗಳನ್ನು ಕಡಿಮೆ ಮಾಡಲು ಕಾಫಿ ಸಹಕರಿಸುತ್ತದೆ. ಯಕೃತ್ ಕ್ಯಾನ್ಸರ್, ಸಿರೋಸಿಸ್ ಕಾಯಿಲೆಗಳು ಬಾರದಂತೆ ತಡೆಗಟ್ಟಲು ಒಂದು ಕಪ್ ಕಾಫಿ ಪ್ರಯೋಜನಕಾರಿಯಾಗಿದೆ.
ಹಿತಮಿತವಾಗಿ ಕಾಫಿ ಕುಡಿಯುವದರಿಂದ ಅಪಧಮನಿಯ ಹೃದಯ ಕಾಯಿಲೆ, ಪಾರ್ಶ್ವವಾಯು, ಮಧುಮೇಹ ಮತ್ತು ಮೂತ್ರಪಿಂಡದಂತಹ ಕಾಯಿಲೆಯಿಂದ ಸಾಯುವ ಪ್ರಮಾಣ ಕಡಿಮೆ. ನಿಮ್ಮ ದೇಹದಲ್ಲಿ ಗ್ಲುಕೋಸ್ ಅಥವಾ ಸಕ್ಕರೆ ಅಂಶವನ್ನು ಸಂಸ್ಕರಿಸಲು ಸಹಾಯಕಾರಿ. ನೀವು ದಿನಕ್ಕೆ ಒಂದರಿಂದ ಎರಡು ಕಪ್ ಕಾಫಿ ಕುಡಿದರೆ ಹೃದಯ ಸಂಬಂಧಿತ ಸಮಸ್ಯೆ ಉಂಟಾಗುವ ಸಾಧ್ಯತೆ ಕಡಿಮೆ.
ಆದರೆ, ಬುದ್ಧಿವಂತಿಕೆಯಿಂದ ಕಾಫಿ ಸೇವನೆ ಮಾಡಬೇಕು. ಅಂದರೆ ನಮ್ಮ ದೇಹಕ್ಕೆ ಹೇಗೆ ಪರಿಣಾಮ ಬೀರುತ್ತಿದೆ. ಎಷ್ಟು ಪ್ರಮಾಣದಲ್ಲಿ ನಾವು ಕಾಫಿ ಸೇವಿಸಬೇಕು ಎಂಬುದನ್ನು ತಿಳಿದುಕೊಂಡಿರಬೇಕು. ಏಕೆಂದರೆ, ಪ್ರತಿಯೊಂದು ಆಹಾರವೂ ಒಬ್ಬೊಬ್ಬರ ಮೇಲೆ ಒಂದೊಂದು ಪರಿಣಾಮ ಬೀರುತ್ತದೆ. ಅವರ ದೇಹ ಪ್ರಕೃತಿಗೆ ಅನುಸಾರವಾಗಿ ಆಹಾರ ಸೇವಿಸುವುದು ಉತ್ತಮ.