ಪ್ರತಾಪಸಿಂಹನ ಆಕ್ಷೇಪಣೆ ಮುಖ್ಯವಲ್ಲ, ಸಂವಿಧಾನವೇ ನಮಗೆ ಪರಮೋಚ್ಚ: ಡಾ ಹೆಚ್ ಸಿ ಮಹದೇವಪ್ಪ

0
Spread the love

ಬೆಂಗಳೂರು: ವಿಶ್ವವಿಖ್ಯಾತ ಮೈಸೂರು ದಸರಾಗೆ ಸಿದ್ಧತೆಗಳು ಭರ್ಜರಿಯಾಗಿ ನಡೆದಿವೆ. ಕಾಡಿನಿಂದ ನಾಡಿಗೆ ಬಂದ ಗಜಪಡೆಗಳು ತಾಲೀಮು ಆರಂಭಿಸಿವೆ. ಸರ್ಕಾರ ಈ ಬಾರಿ ದಸರಾ ಉದ್ಘಾಟನೆಗೆ ಅಂತರರಾಷ್ಟ್ರೀಯ ಪ್ರತಿಷ್ಠಿತ ಬೂಕರ್ ಪ್ರಶಸ್ತಿ ವಿಜೇತೆ ಕನ್ನಡತಿ ಬಾನು ಮುಷ್ತಾಕ್  ಅವರನ್ನು ಆಯ್ಕೆ ಮಾಡಿದೆ.  ಇದಕ್ಕೆ ಪ್ರತಾಪಸಿಂಹ ಆಕ್ಷೇಪ ಕೂಡ ವ್ಯಕ್ತಪಡಿಸಿದ್ದಾರೆ.

Advertisement

ಇನ್ನೂ ಈ ವಿಚಾರವಾಗಿ ಸಂಬಂಧಿಸಿದಂತೆ ಸಮಾಜ ಕಲ್ಯಾಣ ಖಾತೆ ಸಚಿವ ಡಾ ಹೆಚ್ ಸಿ ಮಹದೇವಪ್ಪ ಪ್ರತಿಕ್ರಿಯೇ ನೀಡಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಧರ್ಮದ ಆಚರಣೆಯು ಜನರ ಆಯ್ಕೆ ಮತ್ತು ವಿವೇಚನೆಗೆ ಬಿಟ್ಟ ವಿಷಯವಾಗಿದೆ, ಸರ್ವರಿಗೂ ಸಮಬಾಳು ಸಮಪಾಲು ಎಂದು ಸಂವಿಧಾನ ಹೇಳುತ್ತದೆ ಎಂದು ಹೇಳಿದರು.

ಇನ್ನೂ ಪ್ರತಾಪಸಿಂಹ ಆಕ್ಷೇಪಣೆ ಎತ್ತಿದರೆ ಏನಂತೆ, ನಮಗೆ ಅವರಿವರು ಹೇಳಿದ್ದು ಮುಖ್ಯವಲ್ಲ, ಸಂವಿಧಾನ ಹೇಳೋದು ಮಾತ್ರ ಪರಮೋಚ್ಛ, ದಸರಾ ನಾಡಿನ ಸಾಂಸ್ಕೃತಿಕ ಜೀವನವನ್ನು ಅಭಿವ್ಯಕ್ತಿಗೊಳಿಸುವ ನಾಡಹಬ್ಬ, ದಸರೆಯನ್ನು ಎಲ್ಲ 140 ಕೋಟಿ ಭಾರತೀಯರು ಅಚರಿಸುತ್ತಾರೆ ಎಂದು ಹೇಳಿದರು.


Spread the love

LEAVE A REPLY

Please enter your comment!
Please enter your name here