ಬೆಂಗಳೂರು: ದಸರಾ ಉದ್ಘಾಟನೆಗೆ ಈ ಬಾರಿ ಬಾನು ಮುಷ್ತಾಕ್ ಆಯ್ಕೆ ಮಾಡಿರುವುದಕ್ಕೆ ಎಲ್ಲೆಡೆ ವಿರೋಧ ವ್ಯಕ್ತವಾಗಿದೆ. ಈ ಸಂಬಂಧ ಮಾತನಾಡಿದ ಬಾನು ಮುಷ್ತಾಕ್,
Advertisement
ಯಾರು ಏನು ಮಾತಾಡುತ್ತಾರೋ ಮಾತಾಡಲಿ. ನಾನು ಸೂಕ್ತ ಸಮಯದಲ್ಲಿ ಮಾತಾಡುತ್ತೇನೆ. ಈ ಹಿಂದೆ ನಾನು ಏನು ಮಾತಾಡಿದ್ದೇನೆ ಎಂದು ಸರಿಯಾಗಿ ತಿಳಿಕೊಂಡು ಮಾತಾಡಲಿ. ಯಾರೋ ವಿರೋಧ ಮಾಡಿದ್ರೆ ನಾನು ಉತ್ತರ ಕೊಡಬೇಕಾ? ಇದರ ಬಗ್ಗೆ ನಾನು ವಿವರವಾಗಿ ಮಾತಾಡ್ತೀನಿ ಎಂದಿದ್ದಾರೆ.
ಸದ್ಯ ವಿರೋಧ ಮಾಡುವ ಬಗ್ಗೆ ನಾನು ಪ್ರತಿಕ್ರಿಯೆ ಕೊಡುವುದಿಲ್ಲ. ವಿರೋಧ ಮಾಡುವವರು ಮಾಡಲಿ ಅದು ಅವರ ಸ್ವಾತಂತ್ರ‍್ಯ. ನಾನು ಅದಕ್ಕೆ ಪ್ರತಿಕ್ರಿಯೆ ಕೊಡಲ್ಲ. ನಾನು ಸೂಕ್ತವಾದ ವೇದಿಕೆಯಲ್ಲಿ ಸಕ್ಷಮವಾಗಿ ಮಾತಾಡ್ತೀನಿ ಎಂದು ತಿಳಿಸಿದ್ದಾರೆ.