ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ನಟ ದರ್ಶನ್ ಜೈಲು ಸೇರಿದ್ದಾರೆ. ಅತ್ತ ದರ್ಶನ್ ಇಲ್ಲದೆಯೇ ಡೆವಿಲ್ ಸಿನಿಮಾದ ಇದ್ರೆ ನೆಮ್ಮದಿಯಾಗ್ ಇರ್ಬೇಕು ಹಾಡನ್ನು ಬಿಡುಗಡೆ ಮಾಡಲಾಗಿದೆ. ಈ ಹಾಡಿನಲ್ಲಿ ದರ್ಶನ್ ಅವರು ಹಾಕಿದ್ದ ಜಾಕೆಟ್ ಗಮನ ಸೆಳೆದಿದ್ದು ಈ ಜಾಕೆಟ್ ಬೆಲೆ ಕೇಳಿ ಪ್ರತಿಯೊಬ್ಬರೂ ಶಾಕ್ ಆಗಿದ್ದಾರೆ.
‘ಡೆವಿಲ್’ ಚಿತ್ರದಲ್ಲಿ ದರ್ಶನ್ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾ ಡಿಸೆಂಬರ್ 12ರಂದು ರಿಲೀಸ್ ಆಗಲಿದ್ದು ಚಿತ್ರ ನೋಡೋಕೆ ದರ್ಶನ್ ಫ್ಯಾನ್ಸ್ ತುದಿಗಾಲಲ್ಲಿ ನಿಂತಿದ್ದಾರೆ. ಸದ್ಯ ರಿಲೀಸ್ ಆಗಿರುವ ‘ಇದ್ರೆ ನೆಮ್ಮದಿಯಾಗ್ ಇರ್ಬೇಕ್’ ಹಾಡು ಯೂಟ್ಯೂಬ್ ನಲ್ಲಿ ಸಖತ್ ಸದ್ದು ಮಾಡ್ತಿದ್ದು ಹಾಡನ್ನು ನೋಡಿ ದರ್ಶನ್ ಫ್ಯಾನ್ಸ್ ಸಖತ್ ಖುಷಿಯಾಗಿದ್ದಾರೆ.
ಅಂದ ಹಾಗೆ ಈ ಹಾಡಿನಲ್ಲಿ ದರ್ಶನ್ ಡಿಸೆಲ್ ಕಂಪನಿಯ ಕೆಂಪು ಬಣ್ಣದ ಜಾಕೆಟ್ ಧರಿಸಿದ್ದು ಈ ಜಾಕೆಟ್ ಹಲವರ ಗಮನ ಸೆಳೆದಿದೆ. ಕೆಲವರು ಇದನ್ನು ಖರೀದಿಸಲು ಹುಡುಕಾಟ ಕೂಡ ನಡೆಸಿದ್ದರು. ಅಂದ ಹಾಗೆ ಈ ಜಾಕೆಟ್ ಬೆಲೆ ಬರೋಬ್ಬರಿ 99 ಸಾವಿರ ರೂಪಾಯಿ ಆಗಿದ್ದು, ಸಂಸ್ಥೆ ಸದ್ಯ ಶೆ.20 ಆಫರ್ ನೀಡಿದೆ. ಅಂದರೆ ಈ ಜಾಕೆಟ್ 79,200 ರೂಪಾಯಿಗೆ ಮಾರಾಟ ಆಗುತ್ತಿದೆ.