ವಿಜಯಸಾಕ್ಷಿ ಸುದ್ದಿ, ಮುಳಗುಂದ: ಮಕ್ಕಳು ಕ್ರೀಡಾಕೂಟದಲ್ಲಿ ಭಾಗವಹಿಸುವುದು ಬಹಳ ಮುಖ್ಯ ಎಂದು ಬಿ.ಎಂ.ಎಸ್ ಆಂಗ್ಲ ಮಾಧ್ಯಮ ಶಾಲೆಯ ಪ್ರಧಾನ ಗುರು ಪಾತೀಮಾ ಖವಾಸ ಹೇಳಿದರು.
ಅವರು ಕ್ರೀಡಾಕೂಟದಲ್ಲಿ ಸಾಧನೆಗೈದ ಪಟ್ಟಣದ ಬಾಲಲೀಲಾ ಮಾಹಾಂತ ಶಿವಯೋಗಿ ಶಿಕ್ಷಣ ಸಮಿತಿಯ ಬಿ.ಎಂ.ಎಸ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳನ್ನು ಅಭಿನಂದಿಸಿ ಮಾತನಾಡಿ, ಮಕ್ಕಳು ನಿತ್ಯ ಚಟುವಟಿಕೆಯಿಂದಿರಲು ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯವಾಗಿದ್ದು, ಪಠ್ಯದ ಜೊತೆಯಲ್ಲಿ ಪಠ್ಯೇತರ ಚಟುವಟಿಕೆಯಲ್ಲಿ ಭಾಗವಹಿಸುವುದರಿಂದ ದೈಹಿಕ ಹಾಗೂ ಮಾನಸಿಕವಾಗಿ ಸದೃಢರಾಗಲು ಸಹಕಾರಿಯಾಗುತ್ತದೆ ಎಂದರು.
ಶುಭಂ ಕಬಾಡಿ, ಸುಜನ ನವಲಿ, ಶರೀಫಸಾಬ ಶೇಖ, ನಾಗರಾಜ ಹೊನ್ನಪ್ಪನವರ, ಅಮನ್ ತಹಸೀಲ್ದಾರ, ಗಂಗಾ ಕಟ್ಟಿ, ವೈಷ್ಣವಿ ಕಾಮರೆಡ್ಡಿ, ಅಪ್ಸರಾ ಸದರಭಾವಿ ಈ ವಿದ್ಯಾರ್ಥಿಗಳು ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ ಎಂದು ಅಭಿನಂದಿಸಿದರು.
ದೈಹಿಕ ಶಿಕ್ಷಕಿ ಆಸ್ಮಾ ಕಿಂಡ್ರಿ, ಶಿವಲಿಂಗಪ್ಪ ಕೊಂಡಿಕೊಪ್ಪ, ದಾವಲಸಾಬ, ಪೂಜಾ, ಉಮಾ ಬ್ಯಾಳಿ, ನಸರಿನ ಹುನಗುಂದ ಹಾಗೂ ಸಹ ಶಿಕ್ಷಕರು ಇದ್ದರು.