
ವಿಜಯಸಾಕ್ಷಿ ಸುದ್ದಿ, ಗದಗ: ಕ್ರೀಡಾ ಚಟುವಟಿಕೆಗಳು ಪ್ರತಿಯೊಬ್ಬ ವ್ಯಕ್ತಿಯ ದೈಹಿಕ, ಮಾನಸಿಕ ಬೆಳವಣಿಗೆಗೆ ಸಹಾಯಕಾರಿಯಾಗುತ್ತದೆ. ಹೀಗಾಗಿ ಎಲ್ಲ ವಿದ್ಯಾರ್ಥಿಗಳು ಹಾಗೂ ಯುವಕರು ಕ್ರೀಡಾ ಚಟುವಟಿಕೆಯಲ್ಲಿ ಭಾಗವಹಿಸಲು ಆಸಕ್ತಿ ಬೆಳೆಸಿಕೊಳ್ಳಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ ಕರೆ ನೀಡಿದರು.
ಸಂಕನೂರ ಗ್ರುಪ್ ಆಫ್ ಇನ್‌ಸ್ಟಿಟ್ಯೂಷನ್ ಹಾಗೂ ಲಾನ್ ಟೆನ್ನಿಸ್ ಅಸೋಸಿಯೇಷನ್ ಇವುಗಳ ಸಂಯುಕ್ತ ಆಶ್ರಯದಲ್ಲಿ 79ನೇ ಸ್ವಾತಂತ್ರ್ಯೋವದ ಅಂಗವಾಗಿ ಸಂಕನೂರ ನರ್ಸಿಂಗ್ ಇನ್‌ಸ್ಟಿಟ್ಯೂಟ್‌ನಲ್ಲಿ ಏರ್ಪಡಿಸಿದ್ದ ಟೆನ್ನಿಸ್ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.
ಎನ್.ಸಿ.ಸಿ ಅಧಿಕಾರಿ ಭುವನ ಖರೆ ಮಾತನಾಡಿ, ಸಂಕನೂರ ನರ್ಸಿಂಗ್ ಇನ್‌ಸ್ಟಿಟ್ಯೂಟ್‌ನವರು ಅತ್ಯುತ್ತಮವಾದ ಲಾನ್ ಟೆನ್ನಿಸ್ ಕ್ರೀಡಾಂಗಣ ನಿರ್ಮಿಸಿದ್ದು, ಇದರ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕೆಂದು ಹೇಳಿದರು.
ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ್ ಕುಮಾರ ಕೆಂಚಪ್ಪನವರ ಸಂದಂರ್ಭೋಚಿತವಾಗಿ ಮಾತನಾಡಿದರು. ಗದಗ-ಬೆಟಗೇರಿಯ ಹಿರಿಯ ಲಾನ್ ಟೆನ್ನಿಸ್ ಕ್ರೀಡಾಪಟುಗಳಾದ ಡಾ. ಜೆ.ಸಿ. ಶಿರೋಳ ಮತ್ತು ನಿವೃತ್ತ ಪ್ರಾಧ್ಯಾಪಕರು ಗಂಗಾಧರ ಥಡಿ ಅವರನ್ನು ಸನ್ಮಾನಿಸಲಾಯಿತು. ಕ್ರೀಡಾಕೂಟದಲ್ಲಿ ರಘು ಮೇರವಾಡೆ ಅವರ ತಂಡವು ಗೆಲವು ಸಾಧಿಸಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಪ್ರಕಾಶ ಸಂಕನೂರ ವಹಿಸಿದ್ದರು. ಡಿ.ವೈ.ಎಸ್.ಪಿ ವಿದ್ಯಾನಂದ ನಾಯಕ, ಡಾ. ಗುರುಪ್ರಸಾದ, ಡಾ. ಶ್ರೀಧರ ಕುರಡಗಿ, ಡಾ. ಆದಿತ್ಯ ಗೋಡಖಿಂಡಿ, ಡಾ. ಸಿದ್ಧಾರ್ಥ, ಡಾ. ಹನಮಂತ ಮಾಲಿ, ಡಾ. ಶಶಾಂಕ ಶಿರೋಳ, ಡಾ. ರಾಹುಲ ಶಿರೋಳ, ಡಾ. ಇಂದುಶೇಖರ ಬಳ್ಳಾರಿ, ಡಾ. ವಿರೇಶ ವಿಜಾಪೂರ, ಕ್ರೀಡಾ ತರಬೇತುದಾರ ಶ್ರೀನಿವಾಸ ಬದಿ ಉಪಸ್ಥಿತರಿದ್ದರು. ಉಪ ಪ್ರಾಚಾರ್ಯರಾದ ವಿನ್ಸೆಂಟ್ ಪಾಟೀಲ ಸ್ವಾಗತಿಸಿದರು, ಡಾ. ಪವನ ಪಾಟೀಲ ವಂದಿಸಿದರು.