ಶಂಕರಗೌಡ್ರ ಪಾಟೀಲರಿಗೆ ಪ್ರಶಸ್ತಿ

0
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ತಾಲೂಕಿನ ರಾಮಗಿರಿ ಗ್ರಾಮದವರಾದ, ಸದ್ಯ ಶಹದಾಬಾದ್ ವಿಭಾಗದಲ್ಲಿ ಡಿವೈಎಸ್‌ಪಿಯಾಗಿ ದಕ್ಷ ಮತ್ತು ಪ್ರಾಮಾಣಿಕ ಸೇವೆ ಸಲ್ಲಿಸುತ್ತಿರುವ ಶಂಕರಗೌಡ್ರ ವಿ.ಪಾಟೀಲ ಅವರ ಸೇವೆಯನ್ನು ಪರಿಗಣಿಸಿ ಕೇಂದ್ರ ಗೃಹ ಮಂತ್ರಾಲಯ ಅತ್ಯುತ್ತಮ ತನಿಖಾಧಿಕಾರಿ ಪೊಲೀಸ್ ಸೇವಾ ಪ್ರಶಸ್ತಿ ಪ್ರಕಟಿಸಿದೆ.

Advertisement

ಆಗಸ್ಟ್ 30ರಂದು ಬೆಂಗಳೂರಿನ ಗಾಜಿನ ಮನೆಯಲ್ಲಿ ನಡೆಯುವ ಸಮಾರಂಭದಲ್ಲಿ ರಾಜ್ಯದ ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರಿಂದ ಪ್ರಶಸ್ತಿ ಸ್ವೀಕರಿಸಲಿದ್ದಾರೆ. ದಕ್ಷ ಅಧಿಕಾರಿ ಶಂಕರಗೌಡ್ರ ಪಾಟೀಲ ಅವರಿಗೆ ಅತ್ಯುತ್ತಮ ತನಿಖಾಧಿಕಾರಿ ಪ್ರಶಸ್ತಿಗೆ ದೊರೆತ ಹಿನ್ನೆಲೆಯಲ್ಲಿ ರಾಮಗಿರಿ ಗ್ರಾಮದಲ್ಲಿ ಸಂಭ್ರಮ ವ್ಯಕ್ತವಾಗಿದ್ದು, ಗಂಜಿಗಟ್ಟಿ ಶ್ರೀಗಳು, ಗ್ರಾಮದ ಗಣ್ಯರು, ಜನಪ್ರತಿನಿಧಿಗಳು, ಮುಖಂಡರು ಅಭಿನಂದನೆ ಸಲ್ಲಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here