ಉತ್ತರ ಪ್ರದೇಶ:- ಪ್ರೇಮಿಗಳಿಬ್ಬರೂ ಸಂಚಾರಿ ನಿಯಮವನ್ನು ಬ್ರೇಕ್ ಮಾಡಿ ಚಲಿಸುತ್ತಿದ್ದ ಬೈಕ್ನಲ್ಲೇ ಅಸಭ್ಯ ರೀತಿ ವರ್ತಿಸಿರುವ ಘಟನೆ ಉತ್ತರ ಪ್ರದೇಶದ ಗೋರಖ್ ಪುರದಲ್ಲಿ ಜರುಗಿದೆ.
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಈ ಪ್ರೇಮಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಯುವಕನು ಬೈಕ್ ಓಡಿಸುತ್ತಿದ್ದರೆ, ಪ್ರಿಯತಮೆ ಬೈಕ್ ಟ್ಯಾಂಕ್ ಮೇಲೆ ಕುಳಿತು ಅವನನ್ನು ಬಿಗಿಯಾಗಿ ಅಪ್ಪಿಕೊಂಡಿದ್ದಾಳೆ. ಇಬ್ಬರೂ ಒಬ್ಬರನ್ನೊಬ್ಬರು ನೋಡುತ್ತಾ ತಮಾಷೆ ಮಾಡುತ್ತಿದ್ದಾರೆ. ಸಾರ್ವಜನಿಕರು ತಮ್ಮನ್ನು ನೋಡುತ್ತಾರೆ ಎನ್ನುವ ಪರಿವೇ ಇಲ್ಲದೇ ವರ್ತಿಸುತ್ತಿದ್ದಾರೆ. ರಾಮಗಢ ತಾಲ್ಗೆ ಭೇಟಿ ನೀಡಲು ಹೋಗುತ್ತಿದ್ದ ವೇಳೆ ಈ ಜೋಡಿಹಕ್ಕಿಗಳು ಬೈಕ್ನಲ್ಲೇ ಮೈ ಮರೆತಿದ್ದಾರೆ. ಚಲಿಸುವ ಬೈಕ್ನಲ್ಲಿಯೇ ಜೋಡಿ ಹಕ್ಕಿಗಳು ರೊಮ್ಯಾನ್ಸ್ ಮಾಡುತ್ತಿರುವುದನ್ನು ಅಲ್ಲೇ ಇದ್ದವರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾರೆ.
ಈ ವಿಡಿಯೋ ಆಗಸ್ಟ್ 23 ರಂದು ಶೇರ್ ಮಾಡಿಕೊಂಡಿದ್ದು, ಪೊಲೀಸರ ಗಮನಕ್ಕೂ ಬಂದಿದೆ ಎನ್ನಲಾಗಿದೆ. ಸಾರ್ವಜನಿಕರಿಗೆ ಮುಜುಗರ ಉಂಟು ಮಾಡುವಂತೆ ನಡೆದುಕೊಂಡ ಈ ಜೋಡಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಗೋರಖ್ಪುರ ಪೊಲೀಸರಿಗೆ ಪತ್ರ ಬರೆಯಲಾಗಿದೆ.