ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ದರ್ಶನ್ ಜೈಲು ಸೇರಿದ್ದಾರೆ. ಅವರು ಜೈಲಿನಲ್ಲಿ ಇರುವಾಗಲೇ ‘ಡೆವಿಲ್’ ಸಿನಿಮಾದ ರಿಲೀಸ್ಗೆ ಸಿದ್ಧತೆ ನಡೆದಿದೆ. ಈ ಚಿತ್ರದ ಮೊದಲ ಹಾಡು ‘ಇದ್ರೆ ನೆಮ್ಮದಿಯಾಗ್ ಇರ್ಬೇಕ್’ ಹಾಡು ಆಗಸ್ಟ್ 24ರಂದು ರಿಲೀಸ್ ಆಗಿದೆ.
ಇನ್ನೂ ಇದರ ನಡುವೆ ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ದರ್ಶನ್ ಅವರು ಗೌರಿ ಗಣೇಶ ಹಬ್ಬಕ್ಕೆ ಶುಭಾಶಯ ತಿಳಿಸಿದ್ದಾರೆ. ಪತಿಯೊಂದಿಗೆ ಇರುವ ಫೋಟೋವನ್ನು ಅವರು ಅಪ್ಲೋಡ್ ಮಾಡಿದ್ದಾರೆ. ತಿಳಿ ಹಸಿರು ಬಣ್ಣದ ಸಲ್ವಾರ್ ಧರಿಸಿ ಗಂಡನೊಂದಿಗೆ ನಗುತ್ತಾ ಪೋಸ್ ಕೊಟ್ಟಿದ್ದಾರೆ.
ನಟ ದರ್ಶನ್ ಬೂದಿ ಬಣ್ಣದ ಜೀನ್ಸ್ ಧರಿಸಿಕೊಂಡು ಕಪ್ಪು ಶರ್ಟ್ ಧರಿಸಿದ್ದರು. ಗೌರಿ ಗಣೇಶ ಹಬ್ಬದ ಶುಭಾಶಯಗಳು ಎಂದು ವಿಜಯಲಕ್ಷ್ಮಿ ದರ್ಶನ್ ಎಲ್ಲರಿಗೂ ಹಬ್ಬಕ್ಕೆ ವಿಶ್ ಮಾಡಿದ್ದಾರೆ. ಫೋಟೋ ಶೇರ್ ಮಾಡಿ ಜಸ್ಟ್ ಅರ್ಧ ಗಂಟೆಯಲ್ಲಿ 45 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿವೆ. ಬಹಳಷ್ಟು ಜನ ಅಭಿಮಾನಿಗಳು ಕಮೆಂಟ್ ಮಾಡಿ ಶುಭಾಶಯ ತಿಳಿಸಿದ್ದಾರೆ.