ವಿಜಯಪುರ:– ಜಿಲ್ಲೆಯ ಸಿಂದಗಿ ತಾಲೂಕಿನ ಗಣಿಹಾರ ಗ್ರಾಮದಲ್ಲಿ ಪತಿಯೋರ್ವ ಮಾರಕಾಸ್ತ್ರಗಳಿಂದ ಪತ್ನಿಯನ್ನು ಭೀಕರವಾಗಿ ಕೊಲೆಗೈದು ಎಸ್ಕೇಪ್ ಆಗಿರುವ ಘಟನೆ ಜರುಗಿದೆ.
Advertisement
46 ವರ್ಷದ ನೀಲಮ್ಮ ಆನಗೊಂಡ ಕೊಲೆಯಾದ ಮಹಿಳೆ. ಪರಮಾನಂದ ಕೊಲೆ ಮಾಡಿದ ಪಾಪಿ ಪತಿ. ಹರಿತವಾದ ಆಯುಧದಿಂದ ಪತಿ ಪರಮಾನಂದ ಹೆಂಡತಿಯ ದೇಹ ಕತ್ತರಿಸಿ, ಬಾವಿಗೆ ಎಸೆದು ಪರಾರಿ ಆಗಿದ್ದಾನೆ. ಮೃತ ನೀಲಮ್ಮ ಜಮೀನಿನಲ್ಲಿನ ಮೆಕ್ಕೆಜೋಳಕ್ಕೆ ಹಂದಿಗಳ ಹಾವಳಿ ಇರುವುದರಿಂದ ಪಟಾಕಿ ಸಿಡಿಸಲು ಹೋದ ಸಂದರ್ಭದಲ್ಲಿ ಅವಳ ಬೆನ್ನತ್ತಿ ಹೋದ ಗಂಡನಿಂದ ಈ ಕೃತ್ಯ ನಡೆದಿದೆ. ದೇಹದ ಇನ್ನರ್ಧ ಭಾಗವನ್ನು ಪೊಲೀಸರು ಹುಡುಕಾಟ ಮಾಡುತ್ತಿದ್ದಾರೆ.
ಕೊಲೆಗೆ ನಿಖರವಾದ ಮಾಹಿತಿ ತಿಳಿದು ಬಂದಿಲ್ಲ. ಸಿಂದಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.