ಅರಿಶಿನ, ಕುಂಕುಮ ಬಗ್ಗೆ ಬಾನು ಮುಷ್ತಾಕ್‌ಗೆ ದ್ವೇಷದ ಭಾವನೆ ಇದೆ: ಪ್ರತಾಪ್ ಸಿಂಹ!

0
Spread the love

ಮೈಸೂರು:- ಅರಿಶಿನ, ಕುಂಕುಮ ಬಗ್ಗೆ ಬಾನು ಮುಷ್ತಾಕ್‌ಗೆ ದ್ವೇಷದ ಭಾವನೆ ಇದೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಆರೋಪಿಸಿದ್ದಾರೆ.

Advertisement

ದಸರಾ ಉದ್ಘಾಟಕರಾಗಿ ಬಾನು ಮುಷ್ತಾಕ್ ಆಯ್ಕೆಯಾಗಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಮುಸ್ಲಿಂ ಅನ್ನುವ ಕಾರಣಕ್ಕೆ ನಾನು ವಿರೋಧಿಸುತ್ತಿಲ್ಲ. ಟಿಪ್ಪು ಜಯಂತಿ ಮಾಡಿ ಎಂದು ಮುಸ್ಲಿಮರು ಕೇಳಿರಲಿಲ್ಲ. ಸಿದ್ದರಾಮಯ್ಯ ಮುಸ್ಲಿಮರ ಓಲೈಕೆಗಾಗಿ ಟಿಪ್ಪು ಜಯಂತಿ ಮಾಡಿದರು. ಬಾನು ಮುಷ್ತಾಕ್‌ರನ್ನು ದಸರಾ ಉದ್ಘಾಟನೆಗೆ ಕರೆಯಿರಿ ಎಂದು ಯಾವ ಮುಸ್ಲಿಮರು ಕೇಳಿರಲಿಲ್ಲ. ಅದರೂ ಸಿದ್ದರಾಮಯ್ಯ ಮಾಡಿದರು. ಬಾನು ಮುಷ್ತಾಕ್ ಅವರಿಗೆ ನೇರವಾಗಿ ಪ್ರಶ್ನೆ ಕೇಳ್ತೀನಿ. ಜನ ಸಾಹಿತ್ಯ ಭಾಷಣದಲ್ಲಿ ನಿಮ್ಮ ಭಾಷಣ ಏನಿತ್ತು?

ಮುಸ್ಲಿಮರು ಕನ್ನಡ ಕಲಿಯಲು ಭುವನೇಶ್ವರಿ ತಾಯಿ ಮೂರ್ತಿ ಅಡ್ಡಿಯಾಯಿತು ಎಂದು ಅವರು ಹೇಳಿದ್ದಾರೆ. ಭುವನೇಶ್ವರಿಗೆ ಅರಿಶಿನ, ಕುಂಕುಮ ಇಟ್ಟಿದ್ದರಿಂದ ಮುಸ್ಲಿಮರು ಕನ್ನಡ ಕಲಿಯಲು ಆಗಿಲ್ಲ ಎಂದು ಮುಷ್ತಾಕ್ ಹೇಳಿದ್ದು ಸತ್ಯ ತಾನೆ? ಕನ್ನಡವನ್ನು ಭುವನೇಶ್ವರಿ ಆಗಿ ಒಪ್ಪದ ಬಾನು ಮುಷ್ತಾಕ್, ನಾಡದೇವಿ ರೂಪದಲ್ಲಿನ ಚಾಮುಂಡಿಯನ್ನು ಒಪ್ಪುತ್ತಾರಾ? ಅರಿಶಿನ, ಕುಂಕುಮ ಬಗ್ಗೆ ಯಾಕೆ ಬಾನು ಮುಷ್ತಾಕ್‌ಗೆ ತಕರಾರು, ಕಿರಿಕಿರಿ ಇದೆ? ಹಿಂದೂಗಳ ಮನೆಯಲ್ಲಿ ಯಾರೇ ಸುಮಂಗಲಿ ಹೋದರೂ ಕುಂಕುಮ ಕೊಡುತ್ತಾರೆ. ದೇವಸ್ಥಾನಕ್ಕೆ ಹೋದರೆ ಕುಂಕುಮ ಪ್ರಸಾದವಾಗಿ ಕೊಡುತ್ತಾರೆ. ಇಂತಹ ಕುಂಕುಮವೇ ಬಾನು ಮುಷ್ತಾಕ್‌ಗೆ ಕಿರಿಕಿರಿ ಉಂಟು ಮಾಡಿದೆ. ಅರಿಶಿನ ಕುಂಕುಮ ಬಗ್ಗೆ ಅವರಿಗೆ ದ್ವೇಷದ ಭಾವನೆ ಇದೆ ಎಂದು ಟಾಂಗ್ ಕೊಟ್ಟರು.

ನೀವು ನಂಬಿರುವ ನಿಮ್ಮ ಅಲ್ಲಾ ನಿಮ್ಮನ್ನು ಮಸೀದಿಗೆ ಕರೆಸಿಕೊಳ್ಳುವುದಿಲ್ಲ. ನಮ್ಮ ದೇವರು ಹೇಗೆ ಕರೆಸಿ ಕೊಳ್ಳುತ್ತಾರೆ? ತಮಿಳುನಾಡಿನಲ್ಲಿ ಮುಸ್ಲಿಮಗೆ ಮಾತೃ ಭಾಷೆ ತಮಿಳು. ಕರ್ನಾಟಕದಲ್ಲಿ ಯಾಕೆ ಮುಸ್ಲಿಮರಿಗೆ ಮಾತೃ ಭಾಷೆ ಕನ್ನಡ ಆಗಲ್ಲ? ತಲೆ ಮಾಸಿದ ಕಾಂಗ್ರೆಸ್ ನಾಯಕರು ನನಗೂ ಪ್ರಶ್ನೆ ಮಾಡಿದ್ದಾರೆ. ಇಸ್ಲಾಂ, ಕಿಶ್ಚಿಯನ್ ಅಕ್ರಮಣಕಾರಿ ಆಗಿ ಭಾರತಕ್ಕೆ ಬಂದವರು. ನಮ್ಮ ಆಚಾರ, ವಿಚಾರ, ಸಂಸ್ಕೃತಿ ಒಡೆದು ಹಾಕಲು ಯತ್ನಿಸಿದ್ದು, ಘಜ್ನಿ, ಮೊಗಲರು. ಇದೇ ರೀತಿ ನಮ್ಮ ನಂಬಿಕೆಯನ್ನು ಬಾನು ಮುಷ್ತಾಕ್ ಒಡೆಯುತ್ತಿದ್ದಾರೆ ಎಂದು ಅಸಮಾಧಾನ ಹೊರಹಾಕಿದರು.


Spread the love

LEAVE A REPLY

Please enter your comment!
Please enter your name here