ಇತ್ತೀಚೆಗಷ್ಟೇ ಭಾರತದ ಟೆಸ್ಟ್ ಕ್ರಿಕೆಟ್ಗೆ ಗುಡ್ಬೈ ಹೇಳಿದ್ದ ಆಲ್ರೌಂಡರ್ ರವಿಚಂದ್ರನ್ ಅಶ್ವಿನ್ ಅವರು ಈಗ ಐಪಿಎಲ್ಗೂ ನಿವೃತ್ತಿ ಘೋಷಿಸಿದ್ದಾರೆ.
ಟಿ20 ಪಂದ್ಯಗಳಲ್ಲಿ ಅತ್ಯುತ್ತಮ ಸ್ಪಿನ್ನರ್ ಎಂದು ಖ್ಯಾತಿ ಪಡೆದಿರುವ ಆರ್ ಅಶ್ವಿನ್ ಅವರು, ಆಡಿದ ಐಪಿಎಲ್ ಟೂರ್ನಿಗಳಲ್ಲಿ ಇದುವರೆಗೆ 187 ವಿಕೆಟ್ಗಳನ್ನು ಉರುಳಿಸಿದ್ದಾರೆ. 833 ರನ್ ಗಳಿಸಿದ್ದು ಇದರಲ್ಲಿ ಒಂದು ಅರ್ಧಶತಕ ಸೇರಿದೆ. ಐಪಿಎಲ್ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದವರ ಪೈಕಿ ಆರ್ ಅಶ್ವಿನ್ ಅವರು ಐದನೇ ಸ್ಪಿನ್ನರ್ ಎನಿಸಿಕೊಂಡಿದ್ದಾರೆ.
ಈವರೆಗೆ ಆರ್ ಅಶ್ವಿನ್ ಅವರು 16 ಸೀಸನ್ಗಳಲ್ಲಿ 5 ತಂಡಗಳ ಪರ ಆಡಿದ್ದರು. 2025ರ ಮೆಗಾ ಆಕ್ಷನ್ನಲ್ಲಿ ಅಶ್ವಿನ್ ಮತ್ತೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಭಾಗವಾಗಿದ್ದರು. ಆದರೆ ಕಳೆದ ಋತುವಿನಲ್ಲಿ ಪ್ರದರ್ಶನ ಕಳಪೆಯಾಗಿತ್ತು. ಸಿಎಸ್ಕೆ ಪರವಾಗಿ ಒಟ್ಟು 7 ಸೀಸನ್ಗಳನ್ನು ಆಡಿದ್ದ ಅಶ್ವಿನ್ ಉಳಿದವುಗಳನ್ನು ಬೇರೆ ತಂಡಗಳ ಪರವಾಗಿ ಬೌಲಿಂಗ್ ಮಾಡಿದ್ದರು ಎನ್ನಲಾಗಿದೆ.