‘ಚಾಮುಂಡಿ ಬೆಟ್ಟ ಹಿಂದೂಗಳ ಆಸ್ತಿ ಅಲ್ಲ’ ಎಂದ ಡಿಕೆಶಿ: ಸಂಸದ ಯದುವೀರ್ ಹೇಳಿದ್ದೇನು..?

0
Spread the love

ಮೈಸೂರು: ಚಾಮುಂಡಿ ಬೆಟ್ಟ, ಚಾಮುಂಡಿ ದೇವರು ಎಲ್ಲಾ ಧರ್ಮದವರಿಗೂ ಇದೆ. ಅದು ಹಿಂದೂಗಳ ಆಸ್ತಿ ಅಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆ ನೀಡಿದ್ದರು. ಇನ್ನೂ ಈ ವಿಚಾರವಾಗಿ ಕೊಡುಗು-ಮೈಸೂರು ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಪ್ರತಿಕ್ರಿಯೇ ನೀಡಿದ್ದಾರೆ.

Advertisement

ನಗರದಲ್ಲಿ ಮಾತನಾಡಿದ ಅವರು, ಚಾಮುಂಡಿ ಬೆಟ್ಟಕ್ಕೆ ಎಲ್ಲ ಧರ್ಮದವರು ಹೋಗಬಹುದು. ಗೌರಿ ಗಣೇಶ ಅವರನ್ನು ಆರಾಧನೆ ಮಾಡುವ ಸಂದರ್ಭದಲ್ಲಿ ಹಾಸ್ಯಾಸ್ಪದವಾದ ಹೇಳಿಕೆಯನ್ನು ಡಿಸಿಎಂ ನೀಡಿದ್ದಾರೆ ಎಂದು ಹೇಳಿದ್ದಾರೆ.

ಇನ್ನೂ ಹಿಂದೂಗಳ ಭಾವನೆಗೆ ಹಾಗೂ ಮೈಸೂರಿನ ನಿವಾಸಿಗಳಿಗೆ ಧಕ್ಕೆ ಕೊಡುವ ಹೇಳಿಕೆ ನಿಜಕ್ಕೂ ಖಂಡನೀಯ. ಸಾವಿರಾರು ವರ್ಷಗಳ ಹಿಂದೆ ಶ್ರೀಮಾರ್ಕಂಡಯ್ಯ ಚಾಮುಂಡಿ ಬೆಟ್ಟದಲ್ಲಿ ತಪಸ್ಸು ಮಾಡಿ ವಿಗ್ರಹಗಳನ್ನು ಕೆತ್ತನೆ ಮಾಡಿರುವ ಉಲ್ಲೇಖಗಳು ಪುರಾಣಗಳಲ್ಲಿ ಇವೆ.

ನಮ್ಮ ಇತಿಹಾಸದಲ್ಲೇ ಬೆಟ್ಟಕ್ಕೆ ಸಾವಿರ ವರ್ಷ ಇದೆ. ಹಿಂದೂ, ಜೈನ, ಬೌದ್ಧ ಧರ್ಮ ಬಿಟ್ಟರೇ ಭಾರತದಲ್ಲಿ ಮೊದಲು ಯಾವುದೇ ಧರ್ಮ ಇರಲಿಲ್ಲ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದ್ದಾರೆ.


Spread the love

LEAVE A REPLY

Please enter your comment!
Please enter your name here