ಕೊರೊನಾದಿಂದ ಗುಣಮುಖರಾದ ವೈದ್ಯರಲ್ಲಿ ಕಂಡು ಬಂದ ಎರಡು ಫಂಗಸ್!

Vijayasakshi (Gadag News) :

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಕೊರೊನಾ ಸೋಂಕು ತಗುಲಿ, ಚೇತರಿಸಿಕೊಂಡ ಬಳಿಕ ನಗರದ ವೈದ್ಯರೊಬ್ಬರಲ್ಲಿ ಕಪ್ಪು ಹಾಗೂ ಹಸಿರು ಎರಡೂ ಶಿಲೀಂಧ್ರಗಳ ಸೋಂಕು ಕಾಣಿಸಿಕೊಂಡಿವೆ. ಎರಡು ವಿಧದ ಶಿಲೀಂಧ್ರ ಸೋಂಕು ಒಬ್ಬ ವ್ಯಕ್ತಿಯಲ್ಲಿ ಕಾಣಿಸಿಕೊಂಡ ದೇಶದ ಮೊದಲ ವ್ಯಕ್ತಿ ಈ ವೈದ್ಯರಾಗಿದ್ದಾರೆ.
ಡಾ. ಕಾರ್ತಿಕೇಯನ್ ಆರ್‌. ಎಂಬುವವರೇ ಈ ಕಪ್ಪು ಮತ್ತು ಹಸಿರು ಶಿಲೀಂಧ್ರ ಸೋಂಕಿಗೆ ತುತ್ತಾದವರಾಗಿದ್ದಾರೆ.

ಬಿಜಿಎಸ್ ಗ್ಲೆನಿಗಲ್ಸ್ ಗ್ಲೋಬಲ್ ಆಸ್ಪತ್ರೆಯಲ್ಲಿ ಈ ವೈದ್ಯರಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದೆ.
ಕಳೆದ ಎಪ್ರಿಲ್‌ ನಲ್ಲಿ ಈ ವೈದ್ಯರಿಗೆ ಕೋವಿಡ್‌ ಸೋಂಕು ತಗುಲಿತ್ತು, ಆಗ ಮೈಸೂರಿನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದರು. ಆದರೆ ಕೆಲ ದಿನಗಳ ಹಿಂದೆ ಮುಖದ ಭಾಗದಲ್ಲಿ ಮರಗಟ್ಟುವಿಕೆ, ನೋವು, ಮೂಗು ಸೋರುವಿಕೆ ಸೇರಿದಂತೆ ವಿವಿಧ ಸಮಸ್ಯೆಗಳು ಅವರಿಗೆ ಕಾಣಿಸಿಕೊಂಡಿದ್ದವು. ಆಗ ತಪಾಸಣೆ ನಡೆಸಿದ ವೈದ್ಯರು, ಸಿಟಿ ಮತ್ತು ಎಂಆರ್‌ಐ ಸ್ಕ್ಯಾನ್ ಮೂಲಕ ಪೊಂಗಸ್ ಸೋಂಕು ತಗುಲಿರುವುದು ದೃಢವಾಗಿದೆ.

ಡಾ.ಕಾರ್ತಿಕೇಯನ್ ವೈದ್ಯರಿಗೆ ಚಿಕಿತ್ಸೆ ನೀಡಿದ ಇಎನ್‌ಟಿ ಶಸ್ತ್ರಚಿಕಿತ್ಸಕ ಡಾ. ಪ್ರಶಾಂತ್ ಆರ್‌. ರೆಡ್ಡಿ ಅವರು ಈ ಬಗ್ಗೆ ಮಾತನಾಡಿದ್ದು, ‘ಅವರ ಮೂಗಿನಲ್ಲಿ ಹಸಿರು ಮಿಶ್ರಿತ ಕಂದು ಬಣ್ಣದ ಉಪ್ಪಿನ ಹರಳು ಮಾದರಿಯ ವಸ್ತುಗಳು ಗೋಚರಿಸಿದವು. ಇದು ಸಾಮಾನ್ಯ ಕಪ್ಪು ಶಿಲೀಂಧ್ರ ಪ್ರಕರಣದಂತೆ ಕಾಣಲಿಲ್ಲ. ಹೆಚ್ಚಿನ ವಿಶ್ಲೇಷಣೆ ನಡೆಸಿದಾಗ ಎರಡು ಮಾದರಿಯ ಸೋಂಕಿಗೆ ಒಳಗಾಗಿರುವುದು ದೃಢಪಟ್ಟಿತು. ಹೀಗಾಗಿ, ಎಂಡೋಸ್ಕೋಪಿ ಶಸ್ತ್ರಚಿಕಿತ್ಸೆ ನಡೆಸಿ, ಸೋಂಕು ನಿವಾರಕ ಔಷಧವನ್ನು ನೀಡಲಾಗಿದೆ’ ಎಂದು ಅವರು ತಿಳಿಸಿದ್ದಾರೆ.

ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTube ಅನುಸರಿಸಿ.
Leave A Reply

Your email address will not be published.

fifteen + eight =