ಬೆಂಗಳೂರು:– ಇದು ನಗರದ ವಾಹನ ಸವಾರರು ನೋಡಲೇಬೇಕಾದ ಸ್ಟೋರಿ. ಯಲಹಂಕ ನ್ಯೂಟೌನ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಆಗಸ್ಟ್ 31 ರಂದು ಗಣೇಶ ವಿಸರ್ಜನಾ ಮೆರವಣಿಗೆ ನಡೆಯಲಿದೆ.
ಯಲಹಂಕ ನ್ಯೂಟೌನ್, ಸಿಂಗಾಪುರ, ಚಿಕ್ಕಬೆಟ್ಟಹಳ್ಳಿ, ದೊಡ್ಡಬೆಟ್ಟಹಳ್ಳಿ, ವಿದ್ಯಾರಣ್ಯಪುರ ಪ್ರದೇಶಗಳ ಆಗಸ್ಟ್ 31 ರಂದು ಗಣೇಶ ವಿಗ್ರಹ ವಿಸರ್ಜನಾ ಮೆರವಣಿಗೆ ನಡೆಯಲಿದೆ. ಸಿಂಗಾಪುರ ಲೇಔಟ್ನಿಂದ ದೊಡ್ಡಬೊಮ್ಮಸಂದ್ರ ಕೆರೆಯವರೆಗೆ ಎರಡು ಪ್ರತ್ಯೇಕ ಗಣೇಶ ವಿಸರ್ಜನಾ ಮೆರವಣಿಗೆ ಸಾಗಲಿದೆ. ಮತ್ತು ಸಂಭ್ರಮ್ ಕಾಲೇಜು ಆರ್ಚ್ನಿಂದ ಅಲ್ಲಾಳಸಂದ್ರ ಕೆರೆಯವರೆಗೆ ಮತ್ತೊಂದು ಮೆರವಣಿಗೆ ಸಾಗಲಿದೆ. ಈ ಸಂದರ್ಭದಲ್ಲಿ ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆ ಇದೆ.
ಸಂಚಾರ ದಟ್ಟಣೆಯನ್ನು ತಪ್ಪಿಸಲು ಮತ್ತು ವಾಹನಗಳ ಸುಗಮ ಸಂಚಾರಕ್ಕಾಗಿ ಬೆಳಿಗ್ಗೆ 09 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಈ ರಸ್ತೆಗಳಲ್ಲಿ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ. ಜಾಲಹಳ್ಳಿ, ಪೀಣ್ಯ, ಯಶವಂತಪುರ, ವಿಜಯನಗರ, ಕೆಂಗೇರಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಂದ ಯಲಹಂಕಕ್ಕೆ ಚಲಿಸುವ ಎಲ್ಲ ವಾಹನಗಳನ್ನು ನಿರ್ಬಂಧಿಸಲಾಗಿದೆ. ಎಂಎಸ್ ಪಾಳ್ಯ-ಜೆಲ್ಲಿ ಮಿಷನ್ ಕ್ರಾಸ್-ಜಿಕೆವಿಕೆ ಬ್ಯಾಕ್ ಗೇಟ್ – ತಿರುಮಲ ಧಾಬಾ – ಅತ್ತೂರು ಜಂಕ್ಷನ್ ಮದರ್ ಡೈರಿ ಜಂಕ್ಷನ್ ನಿಂದ ಬೆಳಿಗ್ಗೆ 09 00 ರಿಂದ ರಾತ್ರಿ 10 00 ರವರೆಗೆ ಚಲಿಸುವುದನ್ನು ನಿರ್ಬಂಧಿಸಲಾಗಿದೆ.
ಬದಲಿ ಮಾರ್ಗ ಬಳಸುವಂತೆ ಸಂಚಾರಿ ಪೊಲೀಸರು ಮನವಿ ಮಾಡಿದ್ದಾರೆ.