ಚಾಮರಾಜನಗರ:- ಚಿಲ್ಲರೆ ಅಂಗಡಿಯಲ್ಲಿ ಕಳ್ಳರು ಕೈಚಳಕ ತೋರಿದ್ದು, 50 ಸಾವಿರ ಕದ್ದೊಯ್ದು ಖದೀಮರು ಎಸ್ಕೇಪ್ ಆಗಿರುವ ಘಟನೆ ಚಾಮರಾಜನಗರ ನಗರಸಭೆ ವ್ಯಾಪ್ತಿಯ ರಾಮಸಮುದ್ರದಲ್ಲಿ ಜರುಗಿದೆ.
Advertisement
ಗಣೇಶ ಹಬ್ಬದಂದೇ ಕಳ್ಳರು ಈ ಕೃತ್ಯ ಎಸಗಿದ್ದಾರೆ. ಚಿಲ್ಲರೆ ಅಂಗಡಿ ಕಳ್ಳತನ ಮಾಡಿರುವ ಖದೀಮರು, ಸುಮಾರು 50 ಸಾವಿರ ನಗದು ಹಣ ಕದ್ದೊಯ್ದು ಎಸ್ಕೇಪ್ ಆಗಿದ್ದಾರೆ. ರಾಮಸಮುದ್ರ ಮಠದ ಕಟ್ಟಡದಲ್ಲಿ ಮಹೇಶ್ ಎಂಬುವವರು, ಬಾಡಿಗೆ ಪಡೆದು ಚಿಲ್ಲರೆ ಅಂಗಡಿ ನಡೆಸುತ್ತಿದ್ದ. ಎಂದಿನಂತೆ ಗೌರಿ ಹಬ್ಬದಂದು ರಾತ್ರಿ 10 ಗಂಟೆಯಲ್ಲಿ ಅಂಗಡಿ ಬಾಗಿಲು ಮುಚ್ಚಿ ಮಾಲೀಕ ಮಹೇಶ್ ಮನೆಗೆ ತೆರಳಿದ್ದ. ಗುರುವಾರ ಮುಂಜಾನೆ 5 ಗಂಟೆಯಲ್ಲಿ ಅಂಗಡಿ ತೆರೆದಾಗ ಕಳ್ಳತನ ನಡೆದಿರೋದು ಬೆಳಕಿಗೆ ಬಂದಿದೆ.