ಭಯಾನಕ ವರದಕ್ಷಿಣೆ ಕ್ರೌರ್ಯ: ಆಸಿಡ್ ಕುಡಿಸಿ ಸೊಸೆ ಕೊಂದ ಅತ್ತೆ!

0
Spread the love

ಲಕ್ನೋ:- ಅಮ್ರೋಹಾ ಜಿಲ್ಲೆಯ ಕಲಖೇಡ ಎಂಬಲ್ಲಿ ಅತ್ತೆ ಹಾಗೂ ಮಾವ ಸೇರಿ 23 ವರ್ಷದ ಸೊಸೆಗೆ ವರದಕ್ಷಿಣೆ ಕಿರುಕುಳ ನೀಡಿ ಆಸಿಡ್‌ ಕುಡಿಸಿ ಹತ್ಯೆ ಮಾಡಿದ್ದಾರೆ.

Advertisement

ಹತ್ಯೆಯಾದ ಮಹಿಳೆಯನ್ನು ಗುಲ್ಫಿಜಾ ಎಂದು ಗುರುತಿಸಲಾಗಿದೆ. ಆಕೆ ಒಂದು ವರ್ಷದ ಹಿಂದೆ ದಿದೌಲಿ ಪೊಲೀಸ್ ಠಾಣೆ ವ್ಯಾಪ್ತಿಯ ಕಲಖೇಡ ಗ್ರಾಮದ ಪರ್ವೇಜ್ ಎಂಬವನನ್ನು ಮದುವೆ ಆಗಿದ್ದಳು. ಆಕೆಯ ಅತ್ತೆ-ಮಾವ 10 ಲಕ್ಷ ರೂ. ನಗದು ಮತ್ತು ಕಾರನ್ನು ನೀಡುವಂತೆ ಒತ್ತಾಯಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಆ.11 ರಂದು ಗಲ್ಫಿಜಾಗೆ ಬಲವಂತವಾಗಿ ಆಸಿಡ್ ಕುಡಿಸಿದ್ದಾರೆ. ಆಕೆಯನ್ನು ಬಳಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. 17 ದಿನಗಳ ಕಾಲ ಜೀವನ್ಮರಣ ಹೋರಾಟದ ನಂತರ ಆಕೆ ಸಾವನ್ನಪ್ಪಿದ್ದಾಳೆ.

ಮಹಿಳೆಯ ತಂದೆ ಫರ್ಕಾನ್ ನೀಡಿದ ದೂರಿನ ಮೇರೆಗೆ, ಪರ್ವೇಜ್, ಅಸಿಮ್, ಗುಲಿಸ್ತಾ, ಮೋನಿಶ್, ಸೈಫ್, ಡಾ. ಭೂರಾ ಮತ್ತು ಬಬ್ಬು ಎಂಬ ಏಳು ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರ, ಎಲ್ಲಾ ಆರೋಪಿಗಳನ್ನು ಬಂಧಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here