ಬೆಂಗಳೂರು,:- ಬಿಎಂಟಿಸಿ ಕಂಡಕ್ಟರ್ ಓರ್ವರು ಪ್ರಯಾಣಿಕನ ಕಪಾಳಕ್ಕೆ ಹೊಡೆದಿರುವ ಘಟನೆ ಬೆಳಕಿಗೆ ಬಂದಿದೆ.
ಟಿಕೆಟ್ ಪಡೆದಿಲ್ಲ ಅಂತ ಪ್ರಯಾಣಿಕನ ಮೇಲೆ ಬಿಎಂಟಿಸಿ ಬಸ್ ಕಂಡಕ್ಟರ್ ಹಲ್ಲೆ ಮಾಡಿರೋ ಆರೋಪ ಕೇಳಿ ಬಂದಿದೆ. ಅನ್ಯಭಾಷಿಕ ಪ್ರಯಾಣಿಕನೊಬ್ಬ ದೇವನಹಳ್ಳಿಯಿಂದ ಮೆಜೆಸ್ಟಿಕ್ ಪ್ರಯಾಣ ಮಾಡುತ್ತಿದ್ದ. ಆದ್ರೆ, ಆ ಪ್ರಯಾಣಿಕ ಟಿಕೆಟ್ ಕೇಳಿ ಪಡೆಯೋದು ಮರೆತಿದ್ದ. ಇದೇ ವೇಳೆ ಚೆಕ್ಕಿಂಗ್ ಅಧಿಕಾರಿಗಳು ಬಂದಿದ್ದಾರೆ. ಆಗ ಪ್ರಯಾಣಿಕ ಟಿಕೆಟ್ ಪಡೆಯದ ವಿಚಾರ ಗೊತ್ತಾಗಿದೆ. ಹೀಗಾಗಿ ಕಂಡಕ್ಟರ್ ಹಾಗೂ ಪ್ರಯಾಣಿಕ ಇಬ್ಬರಿಗೂ ದಂಡ ವಿಧಿಸಲಾಗಿದೆ.
ಇದರಿಂದ ಕೋಪಿತಗೊಂಡ ಕಂಡಕ್ಟರ್ ಪ್ರಯಾಣಿಕನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಆತನ ಕಪಾಳಕ್ಕೆ ಹೊಡೆದಿದ್ದಾರಂತೆ. ಇನ್ನು, ಪ್ರಯಾಣಿಕನ ಮೇಲೆ ಹಲ್ಲೆ ಮಾಡಿದ್ದಕ್ಕೆ ಕಂಡಕ್ಟರ್ ವಿರುದ್ಧ ಸಹ ಪ್ರಯಾಣಿಕರು ಆಕ್ರೋಶ ಹೊರ ಹಾಕಿದ್ದಾರೆ. ಐದು ರೂಪಾಯಿಗೆ ಓರ್ವ ಪ್ರಯಾಣಿಕನ ಮೇಲೆ ಹಲ್ಲೆ ಮಾಡಿದ್ದು ಸರಿಯಿಲ್ಲ ಅಂತ ಆಕ್ರೋಶ ಹೊರ ಹಾಕಿದ್ದಾರೆ.