ಬೆಂಗಳೂರು:- ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ರಾಬರ್ಸ್ ಹಾವಳಿ ಹೆಚ್ಚಾಗಿದೆ. ವಾಕಿಂಗ್ ಹೋಗಲು ಮನೆ ಮುಂದೆ ಬಂದ ವ್ಯಕ್ತಿ ಅಡ್ಡ ಗಟ್ಟಿ ಖದೀಮರು ರಾಬರಿ ಮಾಡಿದ್ದಾರೆ.
ಮಚ್ಚು ತೋರಿಸಿ ಕತ್ತಲ್ಲಿದ್ದ ಚೈನ್ , ಎರಡು ಉಂಗುರ ಕಸಿದು ಪರಾರಿ ಆಗಿದ್ದಾರೆ. ಮಚ್ಚು ತೋರಿಸಿ ರಾಬರಿ ಮಾಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬೈದ್ಯನಾಥ್ ಎಂಬಾತ ಉಂಗುರ ಕೊಡಲ್ಲ ಅಂದಿದ್ದಕ್ಕೆ ಮಚ್ಚು ತೋರಿಸಿ ಇಬ್ಬರು ರಾಬರ್ಸ್ ಬೆದರಿಕೆ ಹಾಕಿದ್ದಾರೆ. ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಸೋಮೇಶ್ವರನಗರದಲ್ಲಿ ಘಟನೆ ಜರುಗಿದೆ.
ಮುಂಜಾನೆ ಐದು ಗಂಟೆ ವೇಳೆಗೆ ನಡೆದಿದ್ದು, ಘಟನೆ ಸಂಬಂಧ ಸಿದ್ದಾಪುರ ಠಾಣೆಗೆ ದೂರು ಕೊಟ್ಟಿದ್ದಾರೆ. ಟ್ರಾವೆಲ್ಸ್ ನಡೆಸ್ತಿದ್ದ ಬೈದ್ಯನಾಥ್ ಪ್ರತಿನಿತ್ಯ ಐದು ಗಂಟೆಗೆ ವಾಕಿಂಗ್ ಹೋಗುವ ಹವ್ಯಾಸ ರೂಢಿಸಿಕೊಂಡಿದ್ದರು.ಇದನ್ನೇ ಗಮನಿಸಿ ಮನೆ ಮುಂಭಾಗದ ಜಗಲಿ ಮೇಲೆ ಕುಂತಾಗ ರಾಬರಿ ನಡೆದಿದೆ. ಘಟನೆ ಸಂಬಂಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.