ತಮಿಳು ಚಿತ್ರರಂಗದ ಖ್ಯಾತ ನಟ ವಿಶಾಲ್ ಮನೆಯಲ್ಲಿ ಡಬಲ್ ಸಂಭ್ರಮ ಮನೆ ಮಾಡಿದೆ. ಒಂದು ಕಡೆ ಇಂದು ನಟ ವಿಶಾಲ್ ಅವರ ಹುಟ್ಟು ಹಬ್ಬವಾದರೇ ಮತ್ತೊಂದು ಕಡೆ ವಿಶಾಲ್ ತಮ್ಮ ಹುಟ್ಟುಹಬ್ಬದ ದಿನವೇ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಹೌದು ನಟ ವಿಶಾಲ್ ನಟಿ ಸಾಯಿ ಧನ್ಶಿಕಾ ಜೊತೆಗೆ ಎಂಗೇಜ್ ಮೆಂಟ್ ಮಾಡಿಕೊಂಡಿದ್ದಾರೆ. ಮೇ ತಿಂಗಳಲ್ಲಿ ತಾವು ಪ್ರೀತಿಸುತ್ತಿರುವ ವಿಷಯವನ್ನು ವಿಶಾಲ್ ಬಹಿರಂಗವಾಗಿ ಹೇಳಿಕೊಂಡಿದ್ದರು. ಇದೀಗ ಸಾಯಿ ಧನ್ಶಿಕಾ ಜೊತೆ ಎಂಗೇಜ್ ಮೆಂಟ್ ಮಾಡಿಕೊಂಡಿದ್ದಾರೆ. ಸಾಯಿ ಧನ್ಶಿಕಾ ತಮಿಳು ಚಿತ್ರರಂಗದ ನಟಿಯಾಗಿದ್ದು, ಈ ಹಿಂದೆ ಕಬಾಲಿ ಸೇರಿದಂತೆ ಇನ್ನೂ ಕೆಲವು ತಮಿಳು ಸಿನಿಮಾಗಳಲ್ಲಿ ನಟಿಸಿದ್ದಾರೆ.
ವಿಶಾಲ್ ಹಾಗೂ ಸಾಯಿ ಧನ್ಶಿಕಾ ಅವರ ನಿಶ್ಚಿತಾರ್ಥವು ವಿಶಾಲ್ ನಿವಾಸದಲ್ಲಿಯೇ ಕುಟುಂಬಸ್ಥರ ಸಮ್ಮುಖದಲ್ಲಿ ಸರಳವಾಗಿ ನೆರವೇರಿದೆ. ಈ ಬಗ್ಗೆ ವಿಶಾಲ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಚೆನ್ನೈನಲ್ಲಿ ನಡೆದ ಯೋಗಿ ದ ಎನ್ನುವ ಸಿನಿಮಾದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ನಟ ವಿಶಾಲ್ ಅವರು, ನಾನು ಮದುವೆ ಆಗುತ್ತಿದ್ದೇನೆ. ಹುಡುಗಿ ಯಾರು ಅಲ್ಲ. ಹುಡುಗಿ ಹಾಗೂ ಅವರ ತಂದೆ ಕೂಡ ಇಲ್ಲೇ ಇದ್ದಾರೆ. ನಟಿ ಸಾಯಿ ಅವರ ಜೊತೆ ನಾನು ಸಪ್ತಪದಿ ತುಳಿಯಲಿದ್ದೇನೆ. ನಾವಿಬ್ಬರು ಒಳ್ಳೆಯ ಲೈಫ್ ಲೀಡ್ ಮಾಡಲಿದ್ದೇವೆ ಎಂದು ಹೇಳಿದ್ದರು. ಇದೀಗ ನಟ ವಿಶಾಲ್, ನಟಿ ಸಾಯಿ ಧನ್ಶಿಕಾ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.