ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಬಾಲ ವಿನಾಯಕ ವಿದ್ಯಾನಿಕೇತನ ಶಾಲೆಯಲ್ಲಿ ರಾಷ್ಟ್ರೀಯ ಕ್ರೀಡಾ ದಿನ ಆಚರಿಸಲಾಯಿತು. ಶಾಲೆಯ ನಿರ್ದೇಶಕ ವಿನಾಯಕ ಆರ್, ಪ್ರಾಚಾರ್ಯ ವಿ.ಎಂ. ಅಡ್ನೂರ್, ಉಪ ಪ್ರಾಚಾರ್ಯ ಪಿ.ಜಿ. ಬ್ಯಾಳಿ ಅವರು ಭಾರತೀಯ ಸರ್ವಕಾಲಿಕ ಶ್ರೇಷ್ಠ ಆಟಗಾರರಾದ ಮೇಜರ್ ಧ್ಯಾನ್ಚಂದ್ರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ, ಕ್ರೀಡಾ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
Advertisement
ಕ್ರೀಡಾ ಮಂತ್ರಿ ಶ್ವೇತಾ ಯಮಗೌಳಿ ಹಾಗೂ ಸಂಗಡಿಗರು ಕ್ರೀಡಾ ಜ್ಯೋತಿಯನ್ನು ತಂದರು. ಪಂಡಿತ ಪುಟ್ಟರಾಜ ಮ್ಯೂಜಿಕ್ ಕ್ಲಬ್ ವತಿಯಿಂದ ಸಿಂಚನಾ ತಳವಾರ ಹಾಗೂ ಸಂಗಡಿಗರು ಪ್ರಾರ್ಥನಾ ಗೀತೆಯನ್ನು ಹಾಡಿದರು. ವಿದ್ಯಾರ್ಥಿನಿ ಐಮನ್ ಕೊಪ್ಪಳ ರಾಷ್ಟ್ರೀಯ ಕ್ರೀಡಾ ದಿನದ ಬಗ್ಗೆ ಭಾಷಣ ಮಾಡಿದಳು. ದೀಪಾ ವಾರದ್ ನಿರೂಪಿಸಿದಳು. ಶಾಲೆಯ ಸಮಸ್ತ ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.