ಆಗಸ್ಟ್ 31ರಂದು ಜೆಡಿಎಸ್‌ನಿಂದ`ಸತ್ಯಯಾತ್ರೆ’

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಶ್ರೀಕ್ಷೇತ್ರ ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಅಪಪ್ರಚಾರವನ್ನು ಖಂಡಿಸಿ, ಆಗಸ್ಟ್ 31ರಂದು ಜೆಡಿಎಸ್ ಪಕ್ಷದಿಂದ ‘ಸತ್ಯ ಯಾತ್ರೆ’ ಹಮ್ಮಿಕೊಳ್ಳಲಾಗಿದೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ವೈ. ಮುಧೋಳ ತಿಳಿಸಿದರು.

Advertisement

ಶುಕ್ರವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಜಾತಿ, ಧರ್ಮ, ಪಕ್ಷವನ್ನು ಮೀರಿ ರಾಜ್ಯದ ಜನತೆ ಪೂಜಿಸುವ ಶ್ರೀಕ್ಷೇತ್ರ ಧರ್ಮಸ್ಥಳದ ಮೇಲೆ ನಡೆಯುತ್ತಿರುವ ಅಪಪ್ರಚಾರವನ್ನು ಪಕ್ಷವು ತೀವ್ರವಾಗಿ ಖಂಡಿಸುತ್ತದೆ. ಈ ಯಾತ್ರೆಯಲ್ಲಿ ರಾಜ್ಯದಾದ್ಯಂತ ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತರು ಭಾಗವಹಿಸಲಿದ್ದು, ಗದಗ ಜಿಲ್ಲೆಯಿಂದ ನೂರಾರು ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಈ ಯಾತ್ರೆಯು ಹಾಸನ ಜಿಲ್ಲೆಯ ಕದಲಿ ಗ್ರಾಮದಿಂದ ಬೆಳಿಗ್ಗೆ 11 ಗಂಟೆಗೆ ಹೊರಟು 12.30ಕ್ಕೆ ಧರ್ಮಸ್ಥಳ ತಲುಪಲಿದೆ. ಅಲ್ಲಿಂದ ದೇವಸ್ಥಾನದವರೆಗ ಪಾದಯಾತ್ರೆ ಮಾಡಲಾಗುವುದು. ಪ್ರಸ್ತುತ ನಡೆಯುತ್ತಿರುವ ಅಪಪ್ರಚಾರದ ಹಿಂದೆ ದೊಡ್ಡ ಷಡ್ಯಂತ್ರವಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವೂ ಈ ಅಪಪ್ರಚಾರಕ್ಕೆ ಪರೋಕ್ಷವಾಗಿ ಬೆಂಬಲ ನೀಡುತ್ತಿರುವ ಅನುಮಾನ ಭಕ್ತರಲ್ಲಿ ಮೂಡಿದೆ. ಒಬ್ಬ ಅನಾಮಿಕ ವ್ಯಕ್ತಿ ನೀಡಿದ ಹೇಳಿಕೆ ಆಧರಿಸಿ ಸರ್ಕಾರ ಯಾವುದೇ ಯೋಚನೆ ಮಾಡದೆ ಎಸ್‌ಐಟಿ ತನಿಖೆಗೆ ಆದೇಶಿಸಿದೆ. ಇದು ಭಕ್ತರ ನಂಬಿಕೆಗೆ ದ್ರೋಹ ಬಗೆಯುವ ಕೆಲಸವಾಗಿದೆ. ಈ ವಿಷಯದಲ್ಲಿ ಸರ್ಕಾರ ಮೌನ ವಹಿಸಿದ್ದು, ಷಡ್ಯಂತ್ರದ ಹಿಂದಿರುವ ಕಾಣದ ಕೈಗಳನ್ನು ಗುರುತಿಸಬೇಕು ಎಂದು ಅವರು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಈರಣ್ಣ ಬಾಳಿಕಾಯಿ, ಗಿರೀಶ್ ಸಂಶಿ, ಹಾಜಿಅಲಿ ಕೊಪ್ಪಳ, ನಿಂಗಪ್ಪ ಪ್ಯಾಟಿ, ತಿಪ್ಪಣ್ಣ ಹುಡೇದ, ದೇವಪ್ಪ ಮಲ್ಲಸಮುದ್ರ, ಕೆ.ಎಫ್. ದೊಡ್ಡಮನಿ, ಸಂಗಪ್ಪ ಯರಹುಣಸಿ, ಚನ್ನಪ್ಪ ಹರಿಹರ, ಭಾಷಾಸಾಬ್ ಬಾಗ್ವಾನ್, ಎಂ.ಎಂ. ಜಾವೂರ ಮುಂತಾದವರಿದ್ದರು.

ಧರ್ಮಸ್ಥಳದ ವಿರುದ್ಧ ಸಮೀರ್, ಚಿನ್ನಯ್ಯ, ತಿಮರೋಡಿ ಸೇರಿದಂತೆ ಅನೇಕರು ಷಡ್ಯಂತ್ರ ಮಾಡಿ ಕೆಟ್ಟ ಹೆಸರು ತರಲು ಪ್ರಯತ್ನಿಸುತ್ತಿದ್ದಾರೆ. ಆದರೆ, ಧರ್ಮಸ್ಥಳದಲ್ಲಿ ಧರ್ಮವಿದೆ ಮತ್ತು ವೀರೇಂದ್ರ ಹೆಗ್ಗಡೆಯವರ ಬೆಂಬಲಕ್ಕೆ ಜೆಡಿಎಸ್ ನಿಂತಿದೆ. ಅಪಪ್ರಚಾರ ಮಾಡುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಎಂ.ವೈ. ಮುಧೋಳ ಆಗ್ರಹಿಸಿದರು.


Spread the love

LEAVE A REPLY

Please enter your comment!
Please enter your name here