ಬೆಂಗಳೂರು:- ಡಿಕೆಶಿಗೆ ಎಲ್ಲಾ ರೀತಿಯ ರಾಜಕೀಯ ಜ್ಞಾನ ಇದೆ, ಅವರೇನು ಹೊಸಬರಲ್ಲ ಎಂದು ಸಚಿವ ಜಿ. ಪರಮೇಶ್ವರ್ ಹೇಳಿದ್ದಾರೆ.
ಬಿಹಾರದಲ್ಲಿ ರಾಹುಲ್ ಗಾಂಧಿ ಯಾತ್ರೆಯಲ್ಲಿ ಭಾಗಿಯಾದ ವಿಚಾರ ಮತ್ತು ಡಿ.ಕೆ ಶಿವಕುಮಾರ್ ಅವರನ್ನ ಬಿಟ್ಟು ಸಿಎಂ ಟೀಂ ಹೋಗಿದೆ ಎಂಬ ವಿಪಕ್ಷಗಳ ಟೀಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದರು. ಬಿಹಾರದಲ್ಲಿ ರಾಹುಲ್ ಗಾಂಧಿ ಯಾತ್ರೆ ನಡೆಯುತ್ತಿದೆ. ಅದಕ್ಕಾಗಿ ನಾವು, ಸಿಎಂ ಎಲ್ಲಾ ಹೋಗಿದ್ವಿ. ಶಿವಕುಮಾರ್ ನಮ್ಮ ಪಕ್ಷದ ಅಧ್ಯಕ್ಷರು. ಅವರು ಡಿಸಿಎಂ ಅನ್ನೋದಕ್ಕಿಂತ ಹೆಚ್ಚಾಗಿ ನಮ್ಮ ಪಕ್ಷದ ಅಧ್ಯಕ್ಷರು. ಅವರದ್ದೇ ಆದ ಗೌರವ, ಘನತೆ ಪಕ್ಷಕ್ಕೆ ಇರೋ ಅಂತಹದ್ದು ಇದೆ ಎಂದಿದ್ದಾರೆ.
ಡಿ.ಕೆ ಶಿವಕುಮಾರ್ ರಾಜಕಾರಣಕ್ಕೆ ಹೊಸಬರು ಅಲ್ಲ. ಅವರು ಸಮರ್ಥರು ಇದ್ದಾರೆ. ಎಲ್ಲಾ ರೀತಿಯಲ್ಲೂ ಅವರಿಗೆ ರಾಜಕೀಯ ಜ್ಞಾನ ಇದೆ. ಅವರನ್ನು ಆ ರೀತಿ ಐಸೋಲೇಶನ್ ಮಾಡಿದ್ರು ಅಂತೆಲ್ಲಾ ಮಾತಾಡೋದು ಸರಿಯಿಲ್ಲ. ಇನ್ನೂ, ವಿಪಕ್ಷ ನಾಯಕ ಅಶೋಕ್ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಹೇಳಿದ್ದಾರೆ.