ರಾತ್ರೋ ರಾತ್ರಿ ಮನೆಯ ಹಿತ್ತಲಲ್ಲಿದ್ದ ಶ್ರೀಗಂಧದ ಮರ ಕದ್ದೊಯ್ದ ಖದೀಮರು!

0
Spread the love

ಧಾರವಾಡ: ಧಾರವಾಡದ ಕಲ್ಯಾಣನಗರ ಎರಡನೇ ಕ್ರಾಸ್‌ನಲ್ಲಿ ಮನೆಯ ಹಿತ್ತಲಲ್ಲಿದ್ದ ಶ್ರೀಗಂಧದ ಮರವನ್ನು ಖದೀಮರು ಕಟಾವು ಮಾಡಿಕೊಂಡು ಹೋದ ಘಟನೆ ಜರುಗಿದೆ.

Advertisement

ರಾಜು ಹುದ್ದಾರ್ ಎಂಬುವವರ ಮನೆಯ ಹಿತ್ತಲಿನಲ್ಲಿದ್ದ ಶ್ರೀಗಂಧದ ಮರವನ್ನೇ ಖದೀಮರು ಕಟಾವು ಮಾಡಿಕೊಂಡು ಹೋಗಿದ್ದಾರೆ. ನಿನ್ನೆ ತಡರಾತ್ರಿ 2 ಗಂಟೆ ಸುಮಾರಿಗೆ ಶ್ರೀಗಂಧ ಚೋರರು ಶ್ರೀಗಂಧದ ಮರಕ್ಕೆ ಕೊಡಲಿ ಏಟು ಕೊಟ್ಟಿದ್ದಾರೆ. ಅದಕ್ಕಿಂತ ಪೂರ್ವದಲ್ಲೇ ಬೀಟ್ ಪೊಲೀಸರು ರೌಂಡ್ಸ್ ಹಾಕಿ ಹೋಗಿದ್ದರು.

ಪೊಲೀಸರು ಬಂದು ಹೋದ ನಂತರ ಶ್ರೀಗಂಧದ ಮರವನ್ನು ಖದೀಮರು ಕಟಾವು ಮಾಡಿಕೊಂಡು ಹೋಗಿದ್ದಾರೆ. ಪೊಲೀಸರು ಬಂದ ವೇಳೆ ಕಳ್ಳರು ಕಂಪೌಂಡ್ ಹಿಂದೆ ಅಡಗಿ ಕುಳಿತಿದ್ದರು. ಪೊಲೀಸರು ಹೋದ ನಂತರ ಕಳ್ಳರು ಮರವನ್ನು ಕದ್ದೊಯ್ದಿದ್ದಾರೆ. ಮನೆಯವರು ಬೆಳಿಗ್ಗೆ ನೋಡಿದಾಗ ಶ್ರೀಗಂಧದ ಮರ ಕಟಾವು ಆಗಿರುವುದು ಗೊತ್ತಾಗಿದೆ.

ಮೂವರು ಕಳ್ಳರ ಚಲನವಲನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಪೊಲೀಸರು ಗಸ್ತು ತಿರುಗಿ ಹೋದ ದೃಶ್ಯಗಳೂ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.


Spread the love

LEAVE A REPLY

Please enter your comment!
Please enter your name here