ನವದೆಹಲಿ: ಇಂದೋರ್‌ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ಪೈಲಟ್‌ಗೆ ಎಂಜಿನ್‌ನಲ್ಲಿ ಬೆಂಕಿಯ ಸೂಚನೆ ಸಿಕ್ಕ ಹಿನ್ನೆಲೆಯಲ್ಲಿ ತಕ್ಷಣ ದೆಹಲಿಯಲ್ಲಿ ತುರ್ತು ಭೂಸ್ಪರ್ಶ ಮಾಡಲಾಯಿತು. ದೆಹಲಿಯಿಂದ ಟೇಕ್‌ಆಫ್ ಆದ ನಂತರ ಸುಮಾರು 30 ನಿಮಿಷಗಳ ಹಾರಾಟದಲ್ಲಿ ವಿಮಾನದ ಬಲಭಾಗದ ಎಂಜಿನ್‌ನಲ್ಲಿ ತಾಂತ್ರಿಕ ತೊಂದರೆ ಕಂಡುಬಂದಿತು.
ಪ್ರಯಾಣಿಕರ ಸುರಕ್ಷತೆ ಖಾತ್ರಿ ಪಡೆಯಲು ಪೈಲಟ್ ತಕ್ಷಣ ವಿಮಾನವನ್ನು ದೆಹಲಿಗೆ ಹಿಂದಿರುಗಿಸಿದರು. ಎಲ್ಲ ಪ್ರಯಾಣಿಕರು ಮತ್ತು ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಎಂದು ಏರ್ ಇಂಡಿಯಾ ಮೂಲಗಳು ತಿಳಿಸಿವೆ.
ಏರ್ ಇಂಡಿಯಾ ಪ್ರಕಟಣೆಯ ಪ್ರಕಾರ, ಎ320 ನಿಯೋ ವಿಮಾನದ ಒಂದು ಎಂಜಿನ್ನ್ನು ಆಫ್ ಮಾಡಲಾಯಿತು. ಬಳಿಕ ವಿಮಾನ ದೆಹಲಿ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿಯಿತು. ಇಂದು ಬೆಳಗ್ಗೆ 6:15ರ ಸುಮಾರಿಗೆ ವಿಮಾನ ತುರ್ತು ಲ್ಯಾಂಡಿಂಗ್ ಮಾಡಲಾಗಿದೆ. ಸುಮಾರು 90ಕ್ಕೂ ಹೆಚ್ಚು ಪ್ರಯಾಣಿಕರಿದ್ದರು ಎಂದು ತಿಳಿಸಲಾಗಿದೆ.



