ಹುಬ್ಬಳ್ಳಿ: ರಾಜ್ಯ ಸರ್ಕಾರ ಆಸ್ತಿ ನೋಂದಣಿ ಶುಲ್ಕ ಹೆಚ್ಚಳ ಮತ್ತು ವಿವಿಧ ನೀತಿಗಳ ಕುರಿತು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪ್ರತಿಕ್ರಿಯೇ ನೀಡಿದ್ದಾರೆ. ಹುಬ್ಬಳ್ಳಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಸ್ಥಿರಾಸ್ತಿ ನೋಂದಣಿ ಶುಲ್ಕವನ್ನು ಎರಡು ಬಾರಿ ಏರಿಸಿದೆ.
ಇದಕ್ಕೂ ಮುಂಚೆ 48 ಬೇರೆ ಬೇರೆ ಐಟಂಗಳ ಮೇಲೆ ಹೆಚ್ಚಳ ಮಾಡಲಾಗಿದೆ. ಇದರಿಂದ ಜನರಿಗೆ ಹೆಚ್ಚಿನ ಭಾರವಾಗಿದೆ. ಕಮರ್ಷಿಯಲ್ ಟ್ಯಾಕ್ಸ್ಗೆ ತಕ್ಕ ಮಟ್ಟಿಗೆ ಏರಿಕೆ ಮಾಡಿಲ್ಲ. ಜೆಎಸ್‌ಟಿ ಇರುವ ಕಾರಣ ಜನರ ಸಮಸ್ಯೆ ಉಂಟಾಗಿದೆ
ಎಂದರು. ಇನ್ನೂ ಕೇವಲ ಐದು ಗ್ಯಾರಂಟಿಗಳಲ್ಲಿ ಮೂರು ಮಾತ್ರ ಪೂರ್ಣವಾಗುತ್ತಿದ್ದು, ವಿದ್ಯುತ್, ಬಸ್, ಶಕ್ತಿ ಯೋಜನೆಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಆರೋಪಿಸಿದರು. ಅನ್ನ ಭಾಗ್ಯ, ಅಕ್ಕಿ ಭಾಗ್ಯ ಯೋಜನೆಗಳೂ ಸರಿಯಾಗಿ ಕಾರ್ಯಗತವಾಗುತ್ತಿಲ್ಲ. ಸರಕಾರಕ್ಕೆ ಮಾನ-ಮರ್ಯಾದೆ ಇಲ್ಲ ಕಿಡಿಕಾರಿದ್ದಾರೆ.



