ಸದ್ದಿಲ್ಲದೇ ಮದುವೆಗೆ ಸಜ್ಜಾದ ಖ್ಯಾತ ಹಾಸ್ಯ ನಟ ಚಿಕ್ಕಣ್ಣ: ಹುಡುಗಿ ಯಾರು?

0
Spread the love

ಕನ್ನಡ ಚಿತ್ರರಂಗದ ಖ್ಯಾತ ಹಾಸ್ಯನಟ ಚಿಕ್ಕಣ್ಣ  ಸದ್ದಿಲ್ಲದೇ ಹಸಮಣೆ ಏರಲು ಸಜ್ಜಾಗಿದ್ದಾರೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರ ಗ್ರಾಮದ ಯುವತಿಯ ಜೊತೆ ಚಿಕ್ಕಣ್ಣ ಹಸಮಣೆ ಏರಲಿದ್ದು ಈಗಾಗಲೇ ಹೂ ಮೂಡಿಸುವ ಶಾಸ್ತ್ರ ನೆರವೇರಿದೆ.

Advertisement

ಹಾಸ್ಯನಟ ಚಿಕ್ಕಣ್ಣ ಅವರ ವಿವಾಹ ಮಹದೇವಪುರ ಗ್ರಾಮದ ಪಾವನಾ ಎಂಬ ಯುವತಿಯ ಜೊತೆ ಫಿಕ್ಸ್‌ ಆಗಿದೆ. ಈಗಾಗಲೇ ಹೂ ಮುಡಿಸುವ ಶಾಸ್ತ್ರವನ್ನು ಎರಡು ಕುಟುಂಬಗಳು ಸೇರಿ ನೇರವೇರಿಸಿರಿದ್ದು, ಎಂಗೇಜ್‌ ಮೆಂಟ್‌ ಹಾಗೂ ಮದುವೆ ದಿನಾಂಕ ಮುಂದಿನ ವಾರ ನಿಗದಿಯಾಗಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಇತ್ತೀಚೆಗೆ ಚಿಕ್ಕಣ್ಣ ಅವರ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಪಾವನಾ ಕೂಡ ಭಾಗಿಯಾಗಿ ಕುತೂಹಲ ಮೂಡಿಸಿದ್ದರು. ಅಂದಹಾಗೆ ಪಾವನಾ ಮೆಕಾನಿಕಲ್‌ ಇಂಜಿನಿಯರ್‌ ಆಗಿದ್ದು ಉದ್ಯಮಿಯೂ ಆಗಿದ್ದಾರೆ.

ʻಅಧ್ಯಕ್ಷʼ ಸಿನಿಮಾದ ಮೂಲಕ ದೊಡ್ಡ ಮಟ್ಟದಲ್ಲಿ ಖ್ಯಾತಿ ಘಳಿಸಿದ್ದ ಚಿಕ್ಕಣ್ಣ ಆ ಬಳಿಕ ಹಲವು ಸ್ಟಾರ್‌ ನಟರ ಜೊತೆ ಸ್ಕ್ರೀನ್‌ ಶೇರ್‌ ಮಾಡಿದ್ದರು. ಇತ್ತೀಚೆಗೆ ತೆರೆಕಂಡ ಉಪಾಧ್ಯಕ್ಷ ಸಿನಿಮಾದಲ್ಲಿ ಚಿಕ್ಕಣ್ಣ ನಾಯಕ ನಟನಾಗಿ ಮಿಂಚಿದ್ದರು.


Spread the love

LEAVE A REPLY

Please enter your comment!
Please enter your name here