ನಾವೇನೂ ಚಿಕ್ಕವರಲ್ಲ, ದೂರವಾಗಲು ಕಾರಣ ಏನೆಂದು ನಮಗೆ ಗೊತ್ತು: ದರ್ಶನ್‌ ಬಗ್ಗೆ ಕಿಚ್ಚನ ಮಾತು 

0
Spread the love

ಬೆಂಗಳೂರು: ನಾವೇನೂ ಚಿಕ್ಕವರಲ್ಲ, ದೂರವಾಗಲು ಕಾರಣ ಏನೆಂದು ನಮಗೆ ಮಾತ್ರ ಗೊತ್ತು ಎಂದು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ದರ್ಶನ್‌ ಸ್ನೇಹದ ಬಗ್ಗೆಮಾತನಾಡಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ದರ್ಶನ್‌ ಬಗ್ಗೆ ಮಾತನಾಡಿದ್ದು, ನಾವಿಬ್ಬರು ದೂರವಾಗಲು ಕಾರಣ ಏನೆಂದು ನಮಗೆ ಮಾತ್ರ ಗೊತ್ತು.

Advertisement

ನಾವೇನೂ ಚಿಕ್ಕವರಲ್ಲ, ಕೆಲವೊಂದು ವಿಷಯಗಳನ್ನು ಮಾತನಾಡಲು ಆಗುವುದಿಲ್ಲ. ಕೆಲವರಿಗೆ ನಾವಿಬ್ಬರು ಒಂದಾಗುವುದು ಇಷ್ಟವಿಲ್ಲ. ಆದರೆ, ಯಾರು ನಮ್ಮನ್ನು ದೂರಮಾಡಿದರೆಂದು ನನಗೆ ಗೊತ್ತಿದೆ ಎಂದರು.

ದರ್ಶನ್‌ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ಬಗ್ಗೆ ಪ್ರತಿಕ್ರಿಯಿಸಿದ ಸುದೀಪ್‌, ಈ ವಿಷಯದಲ್ಲಿ ಕಾನೂನು ಮತ್ತು ಸರ್ಕಾರವೇ ನೋಡಿಕೊಳ್ಳುತ್ತವೆ. ನಾನು ಆ ಬಗ್ಗೆ ಮಾತನಾಡುವುದಿಲ್ಲ, ಎಂದು ಸ್ಪಷ್ಟವಾಗಿ ತಿಳಿಸಿದರು. ಇನ್ನೂ ದರ್ಶನ್‌ ಸಿನಿಮಾಗೆ ಒಳ್ಳೆಯದಾಗಲಿ ಎಂದು ಹಾರೈಸಿದ್ದಾರೆ.

 


Spread the love

LEAVE A REPLY

Please enter your comment!
Please enter your name here