ಲಕ್ಷ್ಮೇಶ್ವರ: ಲಕ್ಷ್ಮೇಶ್ವರ ಪಟ್ಟಣದಲ್ಲಿ ರವಿವಾರ ಗಣೇಶ ಮೂರ್ತಿಗಳ ವಿಸರ್ಜನೆ ಕಾರ್ಯವು ಶಾಂತಿಯುತವಾಗಿ ನಡೆಯಿತು. ಪೊಲೀಸ್ ಠಾಣೆಯವರು ಮಧ್ಯಾಹ್ನದ ಹೊತ್ತಿಗೆ ಠಾಣೆಯ ಮೂರ್ತಿಯ ವಿಸರ್ಜನೆಯನ್ನು ನೆರವೇರಿಸಿದರು. ಭಾನುವಾರ ಸಿಬ್ಬಂದಿಗಳು ಪೊಲೀಸ್ ಠಾಣೆಯಿಂದ ಗಣಪತಿ ಮೂರ್ತಿಯನ್ನು ಟ್ರ್ಯಾಕ್ಟರ್‌ನಲ್ಲಿರಿಸಿ ಶಿಗ್ಲಿ ನಾಕಾವರೆಗೆ ನೃತ್ಯ ಮಾಡುತ್ತಾ ಅತ್ಯಂತ ಸರಳವಾಗಿ ವಿಸರ್ಜನೆ ಮಾಡಿ ಮಾದರಿಯಾದರು. ಈ ಸಂದರ್ಭದಲ್ಲಿ ಪಿಎಸ್‌ಐ ನಾಗರಾಜ ಗಡಾದ, ಅಪರಾಧ ವಿಭಾಗದ ಪಿಎಸ್‌ಐ ಟಿ.ಕೆ. ರಾಥೋಡ ಸೇರಿದಂತೆ ಸಿಬ್ಬಂದಿಗಳು ಪಾಲ್ಗೊಂಡಿದ್ದರು.
Advertisement


