ಆಸ್ಟ್ರೇಲಿಯಾ ತಂಡದ ಸ್ಟಾರ್ ವೇಗಿ ಮಿಚೆಲ್ ಸ್ಟಾರ್ಕ್ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ.
ಟೆಸ್ಟ್ ಕ್ರಿಕೆಟ್ ಮತ್ತು ಮುಂದಿನ ಏಕದಿನ ವಿಶ್ವಕಪ್ ಗೆ ಗಮನ ಹರಿಸುವ ಸಲುವಾಗಿ ಈ ನಿರ್ಧಾರ ಎಂದು 35ರ ಹರೆಯದ ಎಡಗೈ ವೇಗಿ ತಿಳಿಸಿದ್ದಾರೆ. ಆದರೆ ಮಹತ್ವದ ಟೂರ್ನಿಗೆ ತಂಡ ಕಟ್ಟಲು ಪ್ರಯತ್ನಿಸುತ್ತಿರುವ ಕ್ರಿಕೆಟ್ ಆಸ್ಟ್ರೇಲಿಯಾಗೆ ಅವರ ಈ ದಿಢೀರ್ ನಿರ್ಧಾರ ಅಚ್ಚರಿ ಉಂಟು ಮಾಡಿದೆ.
ಈ ಬಗ್ಗೆ ಮಾತನಾಡಿರುವ ಮಿಚೆಲ್ ಸ್ಟಾರ್ಕ್, “ಟೆಸ್ಟ್ ಕ್ರಿಕೆಟ್ ನನ್ನ ಮೊದಲ ಆದ್ಯತೆಯಾಗಿದೆ. ನಾನು ಆಸ್ಟ್ರೇಲಿಯಾ ಪರ ಆಡಿದ ಪ್ರತಿಯೊಂದು ಟಿ20 ಮಾದರಿಯನ್ನು ಇಷ್ಟಪಟ್ಟಿದ್ದೇನೆ. ಅದರಲ್ಲೂ 2021ರ ವಿಶ್ವಕಪ್ ಗೆದ್ದಿದ್ದು ನನಗೆ ತುಂಬಾ ಖುಷಿ ನೀಡಿದೆ. ಆ ತಂಡ ಮತ್ತು ಆಟದ ಮೋಜು ಅದ್ಭುತವಾಗಿತ್ತು.” ಎಂದು ತಿಳಿಸಿದ್ದಾರೆ. ಯುವ ಬೌಲಿಂಗ್ ಪಡೆಗೆ ಟಿ20 ವಿಶ್ವಕಪ್‌ಗೆ ತಯಾರಿ ನಡೆಸಲು ಬೌಲಿಂಗ್ ಬಳಗಕ್ಕೆ ಸಾಕಷ್ಟು ಸಮಯ ಸಿಗುತ್ತದೆ ಎಂದು ಅವರು ಹೇಳಿದ್ದಾರೆ.