ವಿಜಯಸಾಕ್ಷಿ ಸುದ್ದಿ, ಗದಗ: ಕರ್ನಾಟಕ ರಾಜ್ಯ ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿಶ್ವವಿದ್ಯಾಲಯ ಮೈಸೂರು ಇವರು ನಡೆಸುವ ಹಿಂದೂಸ್ಥಾನಿ ಸಂಗೀತ ಹಾಗೂ ತಾಳವಾದ್ಯ ಪರೀಕ್ಷೆಯಲ್ಲಿ ಶ್ರೀ ಕುಮಾರೇಶ್ವರ ಕೃಪಾಪೋಷಿತ ಪ. ಪಂಚಾಕ್ಷರಿ ಗವಾಯಿಗಳವವರ ಸಂಗೀತ ಪಾಠಶಾಲೆಯ ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ.
ಜೂನಿಯರ್ ಗಾಯನ: ಶೋಧನ್ ಶೆಟ್ಟಿ, ಸುಧಾಕರ ಶೆಟ್ಟಿ 346 (ಶೇ.86.50) ಪ್ರಥಮ, ವಿಠ್ಠಲ ಜಿ., ಕುಬೇರ ಜಿ. 342 (ಶೇ.85.50) ದ್ವಿತೀಯ, ಮನೋಜಕುಮಾರ ಬಿ.ಸಿ 339 (ಶೇ.84.75) ತೃತೀಯ ಸಿನೀಯರ್ ಗಾಯನ: ಕವನಾ ಈರಣ್ಣಾ ಕೊಣ್ಣೂರ 413 (ಶೇ.82.60) ಪ್ರಥಮ, ಪ್ರಕಾಶ ನಾಗಣ್ಣಾ 385 (ಶೇ.77.00) ದ್ವಿತೀಯ, ಪುಟ್ಟರಾಜ ಕೆ.ವೆಂಕಟಾಪುರಮಠ 377 (ಶೇ.75.40) ತೃತೀಯ.
ವಿದ್ವತ್ ಪೂರ್ವ ಗಾಯನ: ರಾಮು ಎಸ್.ಸುಡುಗಾಡಸಿದ್ಧ 448 (ಶೇ.74.66), ಹೇಮಂತ ಎಸ್.ವಿ ಹಡಪದ 322 (ಶೇ.80.50) ದ್ವಿತೀಯ, ಮಲ್ಲಿಕಾರ್ಜುನ ಕುಚನೂರ 309(ಶೇ.77.25) ತೃತೀಯ.
ಸೀನಿಯರ್ ತಾಳವಾದ್ಯ: ಏಕಾಂಬ್ರೇಶ ಬಿ.ಹಳ್ಳಿಕೇರಿ 325 (ಶೇ.65) ಪ್ರಥಮ.
ಜೂನಿಯರ್ ವಾಯೋಲಿನ್-ಗುರುಕುಮಾರ ಆರ್.ಹಿರೇಮಠ 357 (ಶೇ.87.25) ಪ್ರಥಮ, ಸವಿತಾ ಎನ್.ಬಾಹೇಟಿ 343 (ಶೇ.85.75), ಪಲ್ಲವಿ ಎಸ್.ಗುಜಮಾಗಡಿ 323 (ಶೇ.80.75) ತೃತೀಯ.
ಜೂನಿಯರ್ ಹಾರ್ಮೋನಿಯಂ: ನಿಖಿತಾ ಎಸ್.ಹೆಬಸೂರ 380.95 (ಪ್ರಥಮ) ನಂದೀಶ ಎಂ.ಕೆ. 342 (ಶೇ.85) ದ್ವಿತೀಯ ಸ್ಥಾನ ಪಡೆದಿದ್ದಾರೆ.
ಡಾ. ಪಿ.ಜಿ.ಎ.ಎಸ್ ಸಮಿತಿಯ ಕಾರ್ಯಾಧ್ಯಕ್ಷರು/ಕಾರ್ಯದರ್ಶಿಗಳು, ಸದಸ್ಯರು ಆಡಳಿತಾಧಿಕಾರಿಗಳು, ಸಂಗೀತ ಪಾಠಶಾಲೆಯ ಮುಖ್ಯೋಪಾಧ್ಯಾಯರು, ಶಿಕ್ಷಕರು ಹಾಗೂ ಶಿಕ್ಷಕೇತರ ಸಿಬ್ಬಂದಿಗಳು ಶಾಲೆಯ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.