ನವದೆಹಲಿ:-ಎರಡು ಕಡೆ ವೋಟರ್ ಐಡಿ ಹೊಂದಿರುವ ಆರೋಪದಡಿ ರಾಹುಲ್ ಗಾಂಧಿ ಅವರ ಆಪ್ತ ಪವನ್ ಖೇರಾ ವಿರುದ್ಧ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು ನೀಡಿದೆ.
ಮತ ಕಳ್ಳತನ ಎಸಗುತ್ತಿರುವ ಬಿಜೆಪಿ ಮೇಲೆ ಹೈಡ್ರೋಜನ್ ಬಾಂಬ್ ಹಾಕಲಾಗುವುದು ಎಂದು ರಾಹುಲ್ ಗಾಂಧಿ ಹೇಳಿದ ಮರುದಿನವೇ ಬಿಜೆಪಿ ಈಗ ಕಾಂಗ್ರೆಸ್ ವಿರುದ್ಧವೇ ಬಾಂಬ್ ಹಾಕಿದೆ. ದೂರಿನ ಬೆನ್ನಲ್ಲೇ ಪವನ್ ಖೇರಾ ಅವರಿಗೆ ಚುನಾವಣಾ ಆಯೋಗ ನೋಟಿಸ್ ನೀಡಿ ಶಾಕ್ ನೀಡಿದೆ.
ದೆಹಲಿಯಲ್ಲಿ ಎರಡು ಕಡೆ ವೋಟರ್ ಐಡಿ ಹೊಂದಿರುವುದಕ್ಕೆ ಚುನಾವಣಾ ಆಯೋಗ ಖೇರಾಗೆ ನೋಟಿಸ್ ನೀಡಿದೆ. ಎರಡು ಕಡೆ ವೋಟರ್ ಐಡಿ ಹೊಂದಿರುವುದು 1950ರ ಜನಪ್ರತಿನಿಧಿ ಕಾಯ್ದೆಯ ಅಡಿ ಶಿಕ್ಷಾರ್ಹ ಅಪರಾಧ. ಈ ಸಂಬಂಧ ಸೆಪ್ಟೆಂಬರ್ 8 ರ ಸೋಮವಾರ ಬೆಳಿಗ್ಗೆ 11 ಗಂಟೆಯೊಳಗೆ ನೋಟಿಸ್‌ಗೆ ಉತ್ತರಿಸಬೇಕು ಮತ್ತು ಕಾಯ್ದೆಯಡಿ ನಿಮ್ಮ ವಿರುದ್ಧ ಕ್ರಮ ಯಾಕೆ ಕೈಗೊಳ್ಳಬಾರದು ಎಂಬುದನ್ನು ತಿಳಿಸಬೇಕು ಎಂದು ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ.