ಬೆಂಗಳೂರು: ಅಕ್ರಮ ಬೆಟ್ಟಿಂಗ್ ಕಂಪನಿ ಹಾಗೂ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಚಿತ್ರದುರ್ಗ ಕಾಂಗ್ರೆಸ್ ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ಇಡಿ ಬಂಧನದಲ್ಲಿದ್ದು, ಇದೀಗ ಶಾಸಕ ಕೆ ಸಿ ವಿರೇಂದ್ರ ಬಂಧನ ಪ್ರಕರಣ ಸಂಬಂಧ ಬರೋಬ್ಬರಿ 55 ಕೋಟಿ ರೂ. ನಗದು ಮುಟ್ಟುಗೋಲು ಮಾಡಲಾಗಿದೆ.
Advertisement
ಈ ಬಗ್ಗೆ ಇಡಿ ಮಾಧ್ಯಮ ಪ್ರಕಟಣೆ ಹೊರಡಿಸಿದ್ದು, ಮಂಗಳವಾರ ಚಳ್ಳಕೆರೆ, ಬೆಂಗಳೂರಿನಲ್ಲಿ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದರು. ದಾಳಿ ವೇಳೆ ವೀರೆಂದ್ರಗೆ ಸೇರಿದ ಕೋಟ್ಯಂತರ ರೂ. ಹಣ ಹಾಗೂ ಐಷಾರಾಮಿ ಐದು ಕಾರುಗಳನ್ನ ಫ್ರೀಜ್ ಮಾಡಿದ್ದಾರೆ ಎಂದು ತಿಳಿಸಿದೆ.
ಅಲ್ಲದೇ ಕೆ.ಸಿ. ವೀರೇಂದ್ರ ಅವರ 9 ಬ್ಯಾಂಕ್ ಖಾತೆಗಳಲ್ಲಿ ಅಂದಾಜು 40.69 ಕೋಟಿ ರೂ. ಪತ್ತೆಯಾಗಿದ್ದು, 262 ಮ್ಯೂಲ್ ಖಾತೆಗಳಲ್ಲಿ ಒಟ್ಟು 14.46 ಕೋಟಿ ರೂ. (ಅಂದಾಜು) ಸೇರಿದಂತೆ 55 ಕೋಟಿ ರೂ. ಹಣವನ್ನು ಇಡಿ ಅಧಿಕಾರಿಗಳು ಫ್ರೀಜ್ ಮಾಡಿದ್ದಾರೆ.