ಗದಗ: ಗದಗ ನಗರದ ವೀರಶೈವ ಲೈಬ್ರರಿ ಬಳಿಯ ಶ್ರೀ ಸುದರ್ಶನ ಚಕ್ರ ಯುವ ಮಂಡಳಿ ವತಿಯಿಂದ ಮಂಗಳವಾರ ಬೆಳಿಗ್ಗೆ ನಾಡಿನ ಶ್ರೇಯೋಭಿವೃದ್ಧಿಗಾಗಿ ಗಣಹೋಮ ನೆರವೇರಿಸಲಾಯಿತು. ನರಸಿಂಹ ಕಾಮರ್ತಿ, ಪಕೀರಸಾ ಭಾಂಡಗೆ, ಸಾಗರ ಪವಾರ, ನಾರಾಯಣಸಾ ಹಬೀಬ ಹಾಗೂ ಪ್ರವೀಣ ಹೆರಕಲ್ಲ ದಂಪತಿಗಳು ಗಣಹೋಮ ಪೂಜೆಯಲ್ಲಿ ಪಾಲ್ಗೊಂಡಿದ್ದರು. ಅಧ್ಯಕ್ಷ ರವಿರಾಜ ಮಾಳೇಕೊಪ್ಪಮಠ, ಸುಧೀರ ಕಾಟೀಗರ, ರಾಘವೇಂದ್ರ ಹಬೀಬ, ಶಿವರಾಜ ಕೋಟಿ, ರವಿ ದಂಡಿನ, ಹುಲಿಗೆಮ್ಮ ಹಬೀಬ, ಸುಮಿತ್ರಾ ಚವ್ಹಾಣ, ವಂದನಾ ವೆರ್ಣೇಕರ, ಅಶ್ವಿನಿ ಜಗತಾಪ, ರತ್ನಾ ಕುರಗೋಡ, ಸೇರಿದಂತೆ ಸಮಿತಿಯ ಪದಾಧಿಕಾರಿಗಳು, ಕಾರ್ಯಕರ್ತರು ಪಾಲ್ಗೊಂಡಿದ್ದರು.
Trending Now



