ಆಸ್ತಿಗಾಗಿ ಜನ್ಮಕೊಟ್ಟ ಅಪ್ಪನಿಗೆ ಖೆಡ್ಡಾ ತೋಡಿದ್ದ ಕುಲಪುತ್ರ ಅರೆಸ್ಟ್!

0
Spread the love

ಮಂಡ್ಯ:- ಆಸ್ತಿಗಾಗಿ ಜನ್ಮಕೊಟ್ಟ ಅಪ್ಪನಿಗೆ ಖೆಡ್ಡಾ ತೋಡಿದ್ದ ಕುಲಪುತ್ರ ಸಿಕ್ಕಿಬಿದ್ದಿರುವ ವಿಚಿತ್ರ ಪ್ರಕರಣ ಜಿಲ್ಲೆಯ ಮದ್ದೂರು ಪಟ್ಟಣದಲ್ಲಿ ಬೆಳಕಿಗೆ ಬಂದಿದೆ. ಮಗ ಪ್ರಣಬ್ ಹಾಗೂ ಮಹೇಶ, ಈಶ್ವರ್, ಪ್ರೀತಮ್ ಬಂಧಿತ ಆರೋಪಿಗಳು.

Advertisement

ಕಿರಾತಕ ಮಗ, ತಂದೆಯ ಕೋಟ್ಯಂತರ ರೂಪಾಯಿ ಆಸ್ತಿಯ ದುರಾಸೆಗೆ ಬಿದ್ದು, ತನ್ನ ವಿರೋಧಿಗಳ ಜೊತೆಗೂಡಿ ತಂದೆಗೆ ಬೆದರಿಕೆ ಹಾಕಿದ್ದಾನೆ. ಇನ್ನು ಈ ಪ್ರಕರಣದಲ್ಲಿ ಮಗ ಸೇರಿದಂತೆ ನಾಲ್ವರು ಆರೋಪಿಗಳನ್ನು ಮದ್ದೂರು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.

ಮದ್ದೂರಿನ ರಿಯಲ್ ಎಸ್ಟೇಟ್ ಉದ್ಯಮಿ ಆಗಿರುವ ಸತೀಶ್, ಮದ್ದೂರು ಸೇರಿದಂತೆ ರಾಜ್ಯದ ಹಲವೆಡೆ ʻರಾಣಿ ಐಶ್ವರ್ಯ ಡೆವಲಪರ್ಸ್ʼ ಹೆಸರಲ್ಲಿ ರಿಯಲ್ ಎಸ್ಟೇಟ್ ಉದ್ಯಮ ನಡೆಸುತ್ತಿದ್ದಾರೆ. ಆದ್ರೆ ತಂದೆ ಮಗ ಪ್ರಣವ್‌ ತಂದೆ ಜೊತೆಗೆ ಆಸ್ತಿ ವಿಚಾರದಲ್ಲಿ ಕಿರಿಕ್‌ ಮಾಡಿಕೊಂಡಿದ್ದ. ಈಗಾಗಲೇ ತಂದೆಯ ಕೋಟ್ಯಂತರ ರೂಪಾಯಿ ಲಾಸ್‌ ಮಾಡಿದ್ದಲ್ಲದೇ ಮತ್ತೆ ಹಣಕ್ಕೆ ಬೇಡಿಕೆಯಿಟ್ಟಿದ್ದ. ತಂದೆ ಹಣ ಕೊಡದೇ ಇದ್ದಾಗ ಬ್ಯ್ಲಾಕ್‌ಮೇಲ್‌ ತಂತ್ರ ಹೂಡಲು ಮುಂದಾಗಿದ್ದ.

ದುಶ್ಚಟಗಳಿಗೆ ಬಲಿಯಾಗಿ ವಿರೋಧಿಗಳ ಜೊತೆ ಸೇರಿ ಆಸ್ತಿಗಾಗಿ ತಂದೆಯನ್ನೇ ಬ್ಲ್ಯಾಕ್‌ ಮೇಲ್‌ ಮಾಡೋಕೆ ಮುಂದಾಗಿದ್ದಾನೆ. ಹಣ ಕೊಡದ ತಂದೆಗೆ ಬುದ್ಧಿ ಕಲಿಸಲು ಕೆಲವರ ಜೊತೆ ಸೇರಿ ಅಪ್ಪನಿಗೆ ಖೆಡ್ಡಾ ತೋಡಿದ್ದಾನೆ. ಅಪ್ಪನ ಭಾವಚಿತ್ರಕ್ಕೆ ಅಶ್ಲೀಲ ಫೋಟೋ ಹಾಗೂ ವಾಯ್ಸ್ ಎಡಿಟ್ ಮಾಡಿ, ವಾಟ್ಸಪ್ ಗ್ರೂಪ್‌ಗೆ ಶೇರ್‌ ಮಾಡಿದ್ದಾನೆ. ಈ ರೀತಿಯ ಕೃತ್ಯದ ಮೂಲಕ ತಂದೆಯನ್ನ ಮಾನಸಿಕವಾಗಿ ಕುಗ್ಗಿಸಿ, ಆಸ್ತಿಯನ್ನ ಲಪಟಾಯಿಸಲು ಯತ್ನಿಸಿದ್ದಾನೆ ಎನ್ನಲಾಗಿದೆ.

ಇದರಿಂದ ರೊಚ್ಚಿಗೆದ್ದ ತಂದೆ ಮದ್ದೂರು ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಮಗ ಸೇರಿದಂತೆ ಕೃತ್ಯಕ್ಕೆ ಪ್ರಚೋದಿಸಿದವರ ವಿರುದ್ಧವೂ ದೂರು ನೀಡಿದ್ದರು. ಉದ್ಯಮಿ ಸತೀಶ್‌ ದೂರಿನ ಮೇರೆಗೆ ತನಿಖೆ ಕೈಗೊಂಡಿದ್ದ ಪೊಲೀಸರು ಮಗ ಪ್ರಣಬ್ ಸೇರಿ ಮಹೇಶ, ಈಶ್ವರ್, ಪ್ರೀತಮ್ ಎಂಬ ನಾಲ್ವರನ್ನ ಬಂಧಿಸಿದ್ದಾರೆ


Spread the love

LEAVE A REPLY

Please enter your comment!
Please enter your name here