ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲು ಸೇರಿದ್ದಾರೆ. ದರ್ಶನ್ ನಟನೆಯ ಡೆವಿಲ್ ಸಿನಿಮಾದ ಹಾಡು ಇತ್ತೀಚೆಗಷ್ಟೇ ಬಿಡುಗಡೆ ಆಗಿದ್ದು ಸದ್ಯದಲ್ಲೇ ಸಿನಿಮಾ ರಿಲೀಸ್ ಆಗಲಿದೆ. ಇದೀಗ ನಟ ಕಂ ನಿರ್ದೇಶಕ ಪ್ರೇಮ್ ಮಾತನಾಡಿದ ನಟ ದರ್ಶನ್ ಅವರು ಜೈಲಿನಿಂದ ಹೊರ ಬಂದ ತಕ್ಷಣ ಅವರ ಜೊತೆ ನಾನೇ ಸಿನಿಮಾ ಮಾಡೋದು ಎಂದು ಹೇಳಿದ್ದಾರೆ.
ಜೋಗಿ ಪ್ರೇಮ್ ಸಿನಿಮಾಗಳ ನಿರ್ದೇಶದಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಪ್ರೇಮ್ ನಿರ್ದೇಶನದ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟನೆಯ ಬಹುನಿರೀಕ್ಷಿತ ಕೆಡಿ ಸಿನಿಮಾದ ಪ್ರಮೋಷನ್ ಕೆಲಸಗಳು ನಡೆಯುತ್ತಿವೆ. ಈ ಮಧ್ಯೆ ಜೋಗಿ ಪ್ರೇಮ್ ಅವರು ಲೈಫ್ ಟುಡೇ ಸಿನಿಮಾಕ್ಕಾಗಿ ಒಂದು ಒಳ್ಳೆಯ ಹಾಡು ಹಾಡಿದ್ದಾರೆ. ಸಿನಿಮಾದ ಹಾಡು ಹಾಡಿದ ಬಳಿಕ ಜೋಗಿ ಪ್ರೇಮ್ ಅವರು ದರ್ಶನ್ ಬಗ್ಗೆ ಮಾತನಾಡಿದ್ದಾರೆ.
ದರ್ಶನ್ ಆರಾಮಾವಾಗಿ ಇದ್ದಾರೆ. ಒಬ್ಬರು ನೋವಲ್ಲಿ ಇರುವಾಗ ಏನೇನೋ ಮಾತನಾಡಬಾರದು. ದರ್ಶನ್ ಸದ್ಯದಲ್ಲೇ ಜೈಲಿನಿಂದ ಹೊರಗೆ ಬರುತ್ತಾರೆ. ದರ್ಶನ್ ಹೊರಗೆ ಬಂದ ತಕ್ಷಣ ನಾನೇ ಸಿನಿಮಾ ಮಾಡುತ್ತೇನೆ. ದರ್ಶನ್ ಜೈಲಿಗೆ ಹೋಗೋ ಎರಡು ದಿನದ ಮೊದಲೇ ಭೇಟಿ ಮಾಡಿದ್ದೆ. ಅದು ಕ್ಯಾಶುಯಲ್ ಭೇಟಿ ಆಗಿತ್ತು ಅಷ್ಟೇ ಎಂದು ಜೋಗಿ ಪ್ರೇಮ್ ಹೇಳಿದ್ದಾರೆ.