ಪ್ರಯಾಣಿಕರಿಗೆ ಗುಡ್ ನ್ಯೂಸ್: ದಸರಾ ಪ್ರಯುಕ್ತ ಬೆಂಗಳೂರು, ಬೆಳಗಾವಿ, ಮೈಸೂರಿಗೆ ವಿಶೇಷ ರೈಲು!

0
Spread the love

ಬೆಂಗಳೂರು:- ದಸರಾ ಹಬ್ಬದ ಅಂಗವಾಗಿ ರೈಲ್ವೇ ಪ್ರಯಾಣಿಕರಿಗೆ ಗುಡ್ ನ್ಯೂಸ್ ಸಿಕ್ಕಿದೆ.

Advertisement

ಎಸ್, 2025ರ ದಸರಾ ಹಬ್ಬಕ್ಕೆ ಕೆಲವೇ ದಿನಗಳು ಬಾಕಿ ಇದ್ದು, ಹೀಗಾಗಲೇ ಸಿದ್ಧತೆಗಳು ಕೂಡ ಜೋರಾಗಿಯೇ ನಡೆಯುತ್ತಿದೆ. ದಸರಾ ನೋಡಲು ರಾಜ್ಯ ಅಷ್ಟೇ ಅಲ್ಲದೇ ಅಂತರರಾಜ್ಯ ಗಳಿಂದಲೂ ಸಾಕಷ್ಟು ಮಂದಿ ದಸರಾ ವೀಕ್ಷಣೆಗೆ ಬರುತ್ತಾರೆ. ಹಾಗೂ ರಾಜ್ಯದ ಮೂಲೆ ಮೂಲೆಗಳಿಂದ ದಸರಾ ವೀಕ್ಷಣೆಗೆ ಸಾಕಷ್ಟು ಜನರು ಬರುತ್ತಾರೆ. ಹೀಗಾಗಿ ಅಂದು ಮೈಸೂರಿಗೆ ಬರುವ ಪ್ರಯಾಣಿಕರಿಗೆ ವಿಶೇಷ ರೈಲುಗಳ ವ್ಯವಸ್ಥೆ ಕಲ್ಪಿಸಲಾಗಿದೆ.

ಎಸ್, ನಾಡಹಬ್ಬ ಮೈಸೂರು ದಸರಾ ಹಬ್ಬಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿಯಿವೆ. ದಸರಾ ಹಬ್ಬ ಕಣ್ತುಂಬಿಕೊಳ್ಳಲು ರಾಜ್ಯದ ಬೇರೆ ಬೇರೆ ಕಡೆಯಿಂದ ಜನರು ಆಗಮಿಸುತ್ತಾರೆ. ಈ ಹಿನ್ನೆಲೆ ಪ್ರಯಾಣಿಕರ ದಟ್ಟಣೆ ನಿಯಂತ್ರಣಕ್ಕೆ ವಿಶೇಷ ರೈಲುಗಳು ಸಂಚರಿಸಲಿವೆ.

ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು, ಬೆಳಗಾವಿ ಮತ್ತು ಮೈಸೂರು ನಡುವೆ ವಿಶೇಷ ರೈಲುಗಳು ಸಂಚರಿಸಲಿವೆ. ರೈಲು ಸಂಖ್ಯೆ, ದಿನಾಂಕ, ಸ್ಥಳ ಸೇರಿದಂತೆ ಸಂಪೂರ್ಣ ಮಾಹಿತಿ ಇಲ್ಲಿದೆ.

ರೈಲು ಸಂಖ್ಯೆ 06271/06272: ಎಸ್‌ಎಂವಿಟಿ ಬೆಂಗಳೂರು-ಬೆಳಗಾವಿ–ಮೈಸೂರು ಎಕ್ಸ್‌ಪ್ರೆಸ್ ವಿಶೇಷ ರೈಲು:

ರೈಲು ಸಂಖ್ಯೆ 06271 2025ರ ಸೆಪ್ಟೆಂಬರ್ 30ರಂದು ಬೆಂಗಳೂರಿನ ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್‌ನಿಂದ ಸಂಜೆ 7 ಗಂಟೆಗೆ ಹೊರಟು, ಮರುದಿನ ಬೆಳಿಗ್ಗೆ 7.30ಕ್ಕೆ ಬೆಳಗಾವಿ ತಲುಪಲಿದೆ. ಈ ರೈಲು ಚಿಕ್ಕಬಾಣಾವರ, ತುಮಕೂರು, ಅರಸೀಕೆರೆ, ಬೀರೂರು, ದಾವಣಗೆರೆ, ಹರಿಹರ, ಎಸ್‌ಎಂಎಂ ಹಾವೇರಿ, ಎಸ್‌ಎಸ್‌ಎಸ್‌ ಹುಬ್ಬಳ್ಳಿ, ಧಾರವಾಡ, ಅಳ್ನಾವರ, ಲೋಂಡಾ ಮತ್ತು ಖಾನಾಪುರ ನಿಲ್ದಾಣಗಳಲ್ಲಿ ನಿಲ್ಲಲಿದೆ.
ರೈಲು ಸಂಖ್ಯೆ 06272 2025ರ ಅಕ್ಟೋಬರ್ 1 ರಂದು ಬೆಳಗಾವಿಯಿಂದ ಸಂಜೆ 5.30ಕ್ಕೆ ಹೊರಟು, ಮರುದಿನ ಬೆಳಿಗ್ಗೆ 7.45ಕ್ಕೆ ಮೈಸೂರಿಗೆ ತಲುಪಲಿದೆ. ಈ ರೈಲು ಮಾರ್ಗದಲ್ಲಿ ಖಾನಾಪುರ, ಲೋಂಡಾ, ಅಳ್ನಾವರ, ಧಾರವಾಡ, ಎಸ್‌ಎಸ್‌ಎಸ್‌ ಹುಬ್ಬಳ್ಳಿ, ಎಸ್‌ಎಂಎಂ ಹಾವೇರಿ, ಹರಿಹರ, ದಾವಣಗೆರೆ, ಬೀರೂರು, ಅರಸೀಕೆರೆ, ತುಮಕೂರು, ಚಿಕ್ಕಬಾಣಾವರ, ಯಶವಂತಪುರ, ಕೆಎಸ್‌ಆರ್‌ ಬೆಂಗಳೂರು ಮತ್ತು ಮಂಡ್ಯ ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿದೆ.

ರೈಲು ಸಂಖ್ಯೆ 06273/06274 ಮೈಸೂರು–ಬೆಳಗಾವಿ–ಎಸ್‌ಎಂವಿಟಿ ಬೆಂಗಳೂರು ಎಕ್ಸ್‌ಪ್ರೆಸ್ ವಿಶೇಷ ರೈಲು:

ರೈಲು ಸಂಖ್ಯೆ 06273 2025ರ ಅಕ್ಟೋಬರ್ 2ರಂದು ಮೈಸೂರಿನಿಂದ ರಾತ್ರಿ 11.45ಕ್ಕೆ ಹೊರಟು, ಅಕ್ಟೋಬರ್ 3 ರಂದು ಮಧ್ಯಾಹ್ನ 12.30ಕ್ಕೆ ಬೆಳಗಾವಿಯನ್ನು ತಲುಪಲಿದೆ. ಈ ರೈಲು ಮಂಡ್ಯ, ಕೆಎಸ್‌ಆರ್ ಬೆಂಗಳೂರು, ಯಶವಂತಪುರ, ಚಿಕ್ಕಬಾಣಾವರ, ತುಮಕೂರು, ಅರಸೀಕೆರೆ, ಬೀರೂರು, ದಾವಣಗೆರೆ, ಹರಿಹರ, ಎಸ್‌ಎಂಎಂ ಹಾವೇರಿ, ಎಸ್‌ಎಸ್‌ಎಸ್‌ ಹುಬ್ಬಳ್ಳಿ, ಧಾರವಾಡ, ಅಳ್ನಾವರ, ಲೋಂಡಾ ಮತ್ತು ಖಾನಾಪುರ ನಿಲ್ದಾಣಗಳಲ್ಲಿ ನಿಲ್ಲಲಿದೆ.

ರೈಲು ಸಂಖ್ಯೆ 06274 2025ರ ಅಕ್ಟೋಬರ್ 3ರಂದು ಬೆಳಗಾವಿಯಿಂದ ಸಂಜೆ 5.30ಕ್ಕೆ ಹೊರಟು, ಮರುದಿನ ಬೆಳಿಗ್ಗೆ 5.00ಕ್ಕೆ ಬೆಂಗಳೂರಿನ ಎಸ್‌ಎಂವಿ ಟರ್ಮಿನಲ್ ತಲುಪಲಿದೆ. ಇದು ಖಾನಾಪುರ, ಲೋಂಡಾ, ಅಳ್ನಾವರ, ಧಾರವಾಡ, ಎಸ್‌ಎಸ್‌ಎಸ್‌ ಹುಬ್ಬಳ್ಳಿ, ಎಸ್‌ಎಂಎಂ ಹಾವೇರಿ, ಹರಿಹರ, ದಾವಣಗೆರೆ, ಬೀರೂರು, ಅರಸೀಕೆರೆ, ತುಮಕೂರು ಮತ್ತು ಚಿಕ್ಕಬಾಣಾವರ ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿದೆ.

ರೈಲು ಸಂಖ್ಯೆ 06275/06276 ಎಸ್‌ಎಂವಿಟಿ ಬೆಂಗಳೂರು–ಬೆಳಗಾವಿ–ಎಸ್‌ಎಂವಿಟಿ ಬೆಂಗಳೂರು ವಿಶೇಷ ಎಕ್ಸ್‌ಪ್ರೆಸ್ ರೈಲು:

ರೈಲು ಸಂಖ್ಯೆ 06275 2025ರ ಅಕ್ಟೋಬರ್ 4 ರಂದು ಬೆಂಗಳೂರಿನ ಎಸ್‌ಎಂವಿಟಿಯಿಂದ ಸಂಜೆ 7 ಗಂಟೆಗೆ ಹೊರಟು, ಮರುದಿನ ಬೆಳಿಗ್ಗೆ 8.25ಕ್ಕೆ ಬೆಳಗಾವಿ ತಲುಪಲಿದೆ.
ರೈಲು ಸಂಖ್ಯೆ 06276 2025ರ ಅಕ್ಟೋಬರ್ 5ರಂದು ಬೆಳಗಾವಿಯಿಂದ ಸಂಜೆ 5.30ಕ್ಕೆ ಹೊರಟು, ಮರುದಿನ ಬೆಳಿಗ್ಗೆ 5.00ಕ್ಕೆ ಬೆಂಗಳೂರಿನ ಎಸ್‌ಎಂವಿಟಿಗೆ ತಲುಪಲಿದೆ.


Spread the love

LEAVE A REPLY

Please enter your comment!
Please enter your name here