ಡಿಸಿಸಿ ಬ್ಯಾಂಕ್ ಚುನಾವಣೆಗೆ ದಿನಗಣನೆ: ಈ ಬಾರಿ ಲಿಂಗಾಯತರನ್ನೇ ಆಯ್ಕೆ ಮಾಡುತ್ತೇವೆ- ಬಾಲಚಂದ್ರ ಜಾರಕಿಹೊಳಿ‌!

0
Spread the love

ಬೆಳಗಾವಿ:- ಡಿಸಿಸಿ ಬ್ಯಾಂಕ್ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಲಿಂಗಾಯತರನ್ನೇ ಆಯ್ಕೆ ಮಾಡುತ್ತೇವೆ ಎಂದು ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ.

Advertisement

ಹುಕ್ಕೇರಿ ಪಟ್ಟಣದಲ್ಲಿ ಮಾತನಾಡಿದ ಅವರು, ಈ ಬಾರಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಲಿಂಗಾಯತರನ್ನೇ ಆಯ್ಕೆ ಮಾಡುತ್ತೇವೆ. ಬೆಳಗಾವಿ ಡಿಸಿಸಿ ಚುನಾವಣೆಯಲ್ಲಿ 16 ರಲ್ಲಿ 12 ಸ್ಥಾನ ಗೆದ್ದೇ ಗೆಲ್ಲುತ್ತೇವೆ. ಮುಂದಿನ‌ ಡಿಸಿಸಿ ಬ್ಯಾಂಕ್ ಅಧ್ಯಕ್ಷರು ನಮ್ಮ ಗುಂಪಿನವರೇ ಆಗುತ್ತಾರೆ ಎಂದು ಭರವಸೆ ವ್ಯಕ್ತಪಡಿಸಿದರು‌.

ಹುಕ್ಕೇರಿ ವಿದ್ಯುತ್ ಸಹಕಾರಿ ಸಂಘದ ಚುನಾವಣೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು ಹುಕ್ಕೇರಿ ಜನರೇ ಬಂದು ನಮ್ಮ ಬಳಿ ಬೆಂಬಲ‌ ಕೇಳಿದ್ದಾರೆ. ಶಾಂತಿ ಸಮಾಧಾನದಿಂದ ಚುನಾವಣೆ ಮಾಡುತ್ತೇವೆ. ಜನರ ಆಶೀರ್ವಾದ ಇದ್ದವರು ಗೆಲ್ಲುತ್ತಾರೆ. ಜಾರಕಿಹೊಳಿ ಸಹೋದರರು ಕಳ್ಳರು ಎಂದ ಮಾಜಿ ಸಚಿವ ಎ ಬಿ ಪಾಟೀಲ್‌ ಅವರು, ತುಡಗರು ಯಾರು ಎಂದು ಸ್ಪಷ್ಟಪಡಿಸಬೇಕು. ರಮೇಶ ಕತ್ತಿ ಅವರನ್ನ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಮಾಡಿದ್ದು ನಾವೇ. ದಿವಂಗತ ಉಮೇಶ ಕತ್ತಿ ಅವರಿಗೆ ಈ ವಿಚಾರ ಗೊತ್ತಿತ್ತು. ರಮೇಶ ಕತ್ತಿ ಅವರಿಗಿಂತ ಚೆನ್ನಾಗಿ ಡಿಸಿಸಿ ಬ್ಯಾಂಕ್ ನಾವು ಮುನ್ನೆಡೆಸುತ್ತೇವೆ. ಮುಂದಿನ ದಿನಗಳಲ್ಲಿ ಅಣ್ಣಾಸಾಹೇಬ ಜೊಲ್ಲೆ ಹಾಗೂ ನಾನು ಹುಕ್ಕೇರಿಯಲ್ಲಿ ಪ್ರಚಾರ ಆರಂಭ ಮಾಡುತ್ತೇವೆ ಎಂದರು.


Spread the love

LEAVE A REPLY

Please enter your comment!
Please enter your name here