ವಿಜಯಸಾಕ್ಷಿ ಸುದ್ದಿ, ಗದಗ: ಕರ್ನಾಟಕ ರಾಜ್ಯ ಸರ್ಕಾರಿ ನೌಕರ ಸಂಘ ಬೆಂಗಳೂರು, ಜಿಲ್ಲಾ ಶಾಖೆ ಗದಗ, ವಿವಿಧ ಇಲಾಖೆಗಳ ವೃಂದ ಸಂಘಗಳು ಮತ್ತು ನೌಕರರ ಸಂಘಟನೆಗಳ ಸಹಯೋಗದಲ್ಲಿ ಸಂಘದ ನೂತನ ಜಿಲ್ಲಾಧ್ಯಕ್ಷರ ಹಾಗೂ ಜಿಲ್ಲಾ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಮತ್ತು ನೌಕರರ ಜನಸ್ನೇಹಿ ಕಾರ್ಯಾಗಾರವನ್ನು ಸೆ.6ರಂದು ಬೆಳಿಗ್ಗೆ 11 ಗಂಟೆಗೆ ನಗರದ ಭಾರತ ರತ್ನ ಪಂ. ಭೀಮಸೇನ ಜೋಶಿ ರಂಗಮಂದಿರದಲ್ಲಿ ಆಯೋಜಿಸಲಾಗಿದೆ.
ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಮಣಕವಾಡದ ಅನ್ನದಾನೇಶ್ವರ ಮಠದ ಅಭಿನವ ಮೃತ್ಯುಂಜಯ ಮಹಾಸ್ವಾಮೀಜಿ ವಹಿಸುವರು. ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಪ್ರವಾಸೋದ್ಯಮ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ ಕಾರ್ಯಕ್ರಮ ಉದ್ಘಾಟಿಸುವರು.
ರಾಜ್ಯ ಸರ್ಕಾರಿ ನೌಕರರ ಗದಗ ಜಿಲ್ಲಾ ಶಾಖೆಯ ಜಿಲ್ಲಾಧ್ಯಕ್ಷ ಡಾ. ಬಸವರಾಜ ಬಳ್ಳಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಖನಿಜ ಅಬಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಶಾಸಕರಾದ ಜಿ.ಎಸ್. ಪಾಟೀಲ, ಶಾಸಕರಾದ ಸಿ.ಸಿ. ಪಾಟೀಲ, ಡಾ. ಚಂದ್ರು ಲಮಾಣಿ, ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ, ಮಾಜಿ ಶಾಸಕ ಡಿ.ಆರ್. ಪಾಟೀಲ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬಬರ್ಚಿ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ. ಅಸೂಟಿ, ನೌಕರ ಸಂಘದ ನಿಕಟಪೂರ್ವ ರಾಜ್ಯ ಹಿರಿಯ ಉಪಾಧ್ಯಕ್ಷ ಹಾಗೂ ಜಿಲ್ಲಾಧ್ಯಕ್ಷ ಡಾ. ರವಿ ಗುಂಜಿಕರ ಆಗಮಿಸುವರು.
ವಿಶೇಷ ಆಹ್ವಾನಿತರಾಗಿ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್, ಅಪರ ಜಿಲ್ಲಾಧಿಕಾರಿ ದುರಗೇಶ ಕೆ.ಆರ್, ಉಪ ವಿಭಾಗಾಧಿಕಾರಿ ಗಂಗಪ್ಪ ಎಂ ಪಾಲ್ಗೊಳ್ಳುವರು.
ಜಿಲ್ಲಾ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳಾದ ಡಿ.ಟಿ ವಾಲ್ಮೀಕಿ, ಎಂ.ಎಂ. ನಿಟ್ಟಾಲಿ, ಡಿ.ಎಸ್. ತಳವಾರ, ಸಿದ್ದಪ್ಪ ಲಿಂಗದಾಳ ಸೇರಿದಂತೆ ತಾಲೂಕಾ ಅಧ್ಯಕ್ಷರುಗಳಾದ ಡಾ. ಎಂ.ಎ. ಹಾದಿಮನಿ, ಮಲ್ಲಿಕಾರ್ಜುನ್ ಹಿರೇಮಠ, ಜಿ.ಡಿ. ಹವಳದ, ಶಿವಪ್ಪ ಹದ್ದಿ, ಎಸ್.ಜಿ. ದಾನಪ್ಪಗೌಡ್ರು, ನಾಗರಾಜ್ ಹಳ್ಳಿಕೇರಿ ಸೇರಿದಂತೆ ಜಿಲ್ಲಾ ನಿರ್ದೇಶಕರು ಸರ್ವರಿಗೂ ಸ್ವಾಗತ ಕೋರಿದ್ದಾರೆ.
ಕಾರ್ಯಕ್ರಮಕ್ಕೂ ಮುನ್ನ ಜಿಲ್ಲಾಡಳಿತ ಭವನದಿಂದ ಭಾರತ ರತ್ನ ಪಂ. ಭೀಮಸೇನ್ ಜೋಶಿ ರಂಗಮಂದಿರದವರೆಗೆ ಕುಂಭಮೇಳ ಮೆರವಣಿಗೆ ಜರುಗಲಿದೆ. ಸಾಂಸ್ಕೃತಿಕ ರಸದೌತಣವನ್ನು ಗದಗ ನಟರಂಗ ಕಲ್ಚರಲ್ ಅಕಾಡೆಮಿ ತಂಡದಿಂದ ಏರ್ಪಡಿಸಿದೆ.
ಅತಿಥಿಗಳಾಗಿ ಗಿರಿಗೌಡ ಎಚ್, ಬಸವರಾಜು, ಶಿವರುದ್ರಯ್ಯ, ಮಲ್ಲಿಕಾರ್ಜುನ ಬಳ್ಳಾರಿ, ಸುರೇಶ ಶೇಡಸ್ಯಾಳ, ನಾಗರಾಜ ಜುಮ್ಮಣ್ಣವರ, ಆರ್.ಮೋಹನ್ ಕುಮಾರ್, ಎಲ್.ಮೋಹನ್ ಕುಮಾರ್, ಹರಿ ರಾಮಕೃಷ್ಣ, ಎಸ್.ಎಫ್. ಸಿದ್ದನಗೌಡರ, ಬಸವರಾಜ ರಾಯವ್ವಗೊಳ, ಮಲ್ಲೇಶ್ ಕರಿಗಾರ, ಬಿ.ಎ. ಕುಂಬಾರ ಪಾಲ್ಗೊಳ್ಳುವರು. ವೈ.ಎನ್. ಗೌಡರ, ವಾಸಣ್ಣ ಕುರಡಗಿ, ರಾಜು ಕುರಡಗಿ, ಪ್ರೇಮನಾಥ್ ಗರಗ, ಆರ್.ಎಲ್. ಲಿಂಬನಾಯಕರ, ಕೆ.ಎಪ್. ಹಳ್ಯಾಳ ಉಪಸ್ಥಿತರಿರುವರು.